Mysore
18
broken clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

I AM VERY SORRY MOM DAD : ಡೆತ್ ನೋಟ್ ಬರೆದಿಟ್ಟು ಫೋಟೊಗ್ರಾಫರ್ ಸಾವು

ಮೈಸೂರು: ನನ್ನಿಂದ ಈ ರೀತಿ ಜೀವಿಸಲು ಸಾಧ್ಯವಿಲ್ಲ. ಈ ತರಹದ ದೂರುಗಳು ಸಹಿಸಲು ಅಸಾಧ್ಯ. ನನ್ನನ್ನು ದಯವಿಟ್ಟು ಕ್ಷಮಿಸಿ, ಏನೇ ಕಷ್ಟ ಬಂದರು ಇದುವರೆಗೂ ಹೇಡಿತನ ಮಾಡದೆ ಇದ್ದಿದಕ್ಕೆ ನನಗೆ ಸಿಕ್ಕ ಪ್ರತಿಫಲ. ಕೊಲೆಯಾದ ಸ್ಥಳದಲ್ಲಿ ಇದ್ದ ಮಾತ್ರಕ್ಕೆ ಯಾರು ಕೊಲೆಗಾರ ಆಗುವುದಿಲ್ಲ. ಇನ್ನೊಂದು ಜನ್ಮ ಇದ್ದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. I AM VERY SORRY MOM DAD ಎಂದು ಡೆತ್ ನೋಟ್ ಬರೆದಿಟ್ಟು ಯುವಕನೋರ್ವ ಸಾವಿಗೆ ಶರನಾಗಿರುವ ಘಟನೆ ನಗರದ ಅಶೋಕಪುರಂ ಪೊಲೀಸ್‌ ಠಾಣಾ  ವ್ಯಾಪ್ತಿಯಲ್ಲಿ ನಡೆದಿದೆ.

ಅಭಿಷೇಕ್ ಎಂಬಾತನೇ ನೇಣಿಗೆ ಶರಣಾದ ಯುವಕ, ಸ್ನೇಹಿತನೊಬ್ಬನಿಂದ ಬರಬೇಕಿದ್ದ ಸಾಲದ ಹಣ ಪಡೆಯಲು ತೆರಳಿದ್ದೆ. ಕೆಲವರು ಗಾಂಜಾ ಸೇವನೆ ಮಾಡಿದ್ದರು. ಆ ಸಮಯದಲ್ಲಿ ಆ ಸ್ಥಳಕ್ಕೆ ಪೊಲೀಸರು ಬಂದರು. ನನ್ನನ್ನು ಅವರೊಂದಿಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ನೀನು ಗಾಂಜಾ ವ್ಯಸನಿಯೇ ಎಂದು ಕೀಳಾಗಿ ನೋಡಿ ಹಿಯಾಳಿಸಿದರು. ಇದು ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದು ಪೊಲೀಸ್‌ ವಿಚಾರಣೆಗೆ ಹೆದರಿ ನೇಣಿಗೆ ಶರಣಾಗಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!