Mysore
20
overcast clouds
Light
Dark

ಅಂಬಾರಿ ಆನೆ ಅರ್ಜುನ ಸಾವು ಪ್ರಕರಣ: 17 ದಿನಗಳ ಬಳಿಕ ತನಿಖೆ ಶುರು

ಡಿಸೆಂಬರ್‌ 4ರಂದು ನಡೆದಿದ್ದ ಕಾಡಾನೆಯೊಂದನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಹುತಾತ್ಮನಾಗಿದ್ದ ದಸರಾ ಆನೆ ಅರ್ಜುನನ ಸಾವಿನ ಸುತ್ತ ಅನುಮಾನಗಳ ಹುತ್ತ ನಿರ್ಮಾಣಗೊಂಡಿತ್ತು. ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆಗೆ ಆದೇಶ ನೀಡಿದ್ದರು.

ಅದರಂತೆ ಇಂದು ( ಡಿಸೆಂಬರ್‌ 21 ) ಬೆಂಗಳೂರಿನಿಂದ ನಿವೃತ್ತ ಮುಖ್ಯ ವನ್ಯಪಾಲಕ ಅಜಯ್‌ ಮಿಶ್ರಾ ನೇತೃತ್ವದ ತನಿಖಾ ತಂಡ ಆಗಮಿಸಿದ್ದು ತನಿಖೆಯನ್ನು ಆರಂಭಿಸಿದೆ. ಮೊದಲಿಗೆ ಅರ್ಜುನ ಹುತಾತ್ಮನಾದ ಹಾಸನದ ಸಕಲೇಶಪುರ ತಾಲೂಕಿನ ಯಸಳೂರು ವಲಯದ ದಬ್ಬಳ್ಳಿ ಕಟ್ಟೆ ಅರಣ್ಯ ಪ್ರದೇಶದ ಜಾಗಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ.

ಕಾರ್ಯಾಚರಣೆ ವೇಳೆ ಅರ್ಜುನ ಆನೆ ಕಾಲಿಗೆ ಗುಂಡೇಟು ಬಿದ್ದು ಸಾವನ್ನಪ್ಪಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಮಾವುತ ವಿನು ಹಾಗೂ ಜನತೆ ಅರ್ಜುನನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ