ಮೈಸೂರು: ವಿವಿಧ ಕ್ಷೇತ್ರಗಳ ಸಾಧಕರಿಗೆ ಮೈಸೂರು ಕನ್ನಡ ವೇದಿಕೆ ವತಿಯಿಂದ ದ.ರಾ.ಬೇಂದ್ರೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಬ್ಬರಾಯನ ಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಮೈಸೂರು ಕನ್ನಡ ವೇದಿಕೆ ಆಯೋಜಿಸಿದ್ದ ಸಮಾರಂಭವನ್ನು ಮೈಸೂರು ಮಹಾನಗರಪಾಲಿಕೆ ಮಹಾಪೌರ ಶಿವಕುಮಾರ್ ಉದ್ಘಾಟಿಸಿದರು.
ಸಾಧಕರಾದ ಲೋಕೇಶ್ ಅಪ್ಪಣ್ಣ(ಕ್ರೀಡೆ), ಡಿ.ಆಯುಷ್ಮಾನ್(ನೃತ್ಯ), ಅಮಿತ್ ಗೌಡ(ನಟ), ಎಚ್.ಎಸ್.ರಾಕೇಶ್(ಸಂಗೀತ), ಡಾ.ರಾಮಸ್ವಾಮಿ(ರಂಗಕರ್ಮಿ), ಯುಕ್ತಿ ಕೃಷ್ಣೇಗೌಡ(ಕ್ರೀಡಾ ತರಬೇತುದಾರ), ಶ್ರೀಷಾ ಭಟ್(ಸಮಾಜ ಸೇವಕಿ), ನಿತಿನ್(ದೃಶ್ಯ ಮಾಧ್ಯಮ), ಪೃಥ್ವಿಸಿಂಗ್ ಚಂದಾವತ, ಮಹೇಂದ್ರ(ಸಮಾಜ ಸೇವಕ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಮಹಾಪೌರ ಶಿವಕುಮಾರ್, ಕನ್ನಡದ ಶ್ರೇಷ್ಢ ಕವಿಗಳಲ್ಲಿ ದ.ರಾ.ಬೇಂದ್ರೆ ಅವರು ಒಬ್ಬರಾಗಿದ್ದರು. ಅಂತಹವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಮೈಸೂರು ಕನ್ನಡ ವೇದಿಕೆಯು ನಾಡು, ನುಡಿಯ ವಿಚಾರದಲ್ಲಿ ಹೋರಾಟ ಮಾಡುತ್ತಿರುವುದನ್ನು ಮೊದಲಿನಿಂದಲೂ ಗಮನಿಸಿದ್ದೇನೆ. ವೇದಿಕೆ ಮತ್ತಷ್ಟು ರಚನಾತ್ಮಕ, ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ಕನ್ನಿಕಾ ಎಜುಕೇಷನಲ್ ಸೊಸೈಟಿಯ ಎಂ.ಸಿ.ಚೌಂದಮ್ಮ, ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಗೋಪಿ, ಮಾಲಿನಿ, ಭವಾನಿ, ಶಶಿಕಲಾ, ಗೋವಿಂದರಾಜು, ಮಹದೇವ ಸ್ವಾಮಿ ಮತ್ತಿತರರು ಹಾಜರಿದ್ದರು.