Mysore
19
mist

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಬಾಂಬ್ ಎಸೆಯುವ ಬಗ್ಗೆ ಮೊಬೈಲ್‌ನಲ್ಲಿ ಮಾತನಾಡಿದ ಆರೋಪ: ಇಬ್ಬರು ಪೊಲೀಸ್ ವಶಕ್ಕೆ

ಮಡಿಕೇರಿ: ಕೊಡಗು ಜಿಲ್ಲೆಯ ಮೇಲೆ ಪೆಟ್ರೋಲ್ ಬಾಂಬ್‌ ಎಸೆಯಲು ಸಂಚು ರೂಪಿಸಿದ ಆರೋಪದಡಿ ಇಬ್ಬರನ್ನು ಮಡಿಕೇರಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಡಿಕೇರಿ ನಗರಸಭೆ ಜೆಡಿಎಸ್ ಸದಸ್ಯ ಮುಸ್ತಫಾ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಬೆಟ್ಟಗೇರಿ ಅಬ್ದುಲ್ಲಾ ಬಂಧಿತರು.
ಇಡೀ‌ ದೇಶವನ್ನೇ ಬೆಚ್ಚಿ ‌ಬೀಳಿಸುವ ಸ್ಫೋಟಕ ಆಡಿಯೋವನ್ನು ಮಡಿಕೇರಿ ನಿವಾಸಿ ಶೇಷಪ್ಪ ರೈರವರು ದಾಖಲೆ ಸಹಿತ ನಗರ ಪೊಲೀಸ್ ಠಾಣೆಗೆ ದೂರಿನ ಮೂಲಕ ನೀಡಿದ್ದಾರೆ‌. ಈ ಸಂಬಂಧ ಪೊಲಿಸರು ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

ಘಟನೆ ವಿವರ: 6 ತಿಂಗಳ ಹಿಂದೆ ಇಬ್ಬರು ವ್ಯಕ್ತಿಗಳು ಮಲಯಾಳ ಭಾಷೆಯಲ್ಲಿ ೩ ನಿಮಿಷ ಮಾತನಾಡಿದ್ದಾರೆ. ಈ ಸಂದರ್ಭ ಹಿಂದೂಗಳು ಜಾಸ್ತಿ ಸೇರುವ ಜಾಗದಲ್ಲಿ ಪೆಟ್ರೋಲ್ ಬಾಂಬ್ ಎಸೆಯಬೇಕು. ಹಿಂದೂ ನಾಯಿಗಳನ್ನು‌ ನಾವು ಸುಮ್ಮನೆ ಬಿಡಬಾರದು. ಪೆಟ್ರೋಲ್ ಬಾಂಬ್ ಹಾಕಿ ಹಿಂದೂಗಳ ಕೊಲ್ಲಬೇಕು. ಇಡೀ ಮಡಿಕೇರಿ ನಗರ ಹೊತ್ತಿ ಉರಿಯುವಂತೆ ಮಾಡ್ಬೇಕು. ನಾವು ಸತ್ತರೂ ಪರವಾಗಿಲ್ಲ ಹಿಂದೂಗಳನ್ನ ಬಿಡಬಾರದು. ಎಷ್ಟು ಹಣ ಬೇಕಾದರೂ ಖರ್ಚಾದರೂ ತೊಂದರೆ ಇಲ್ಲ. ನಾವೆಲ್ಲಾ ಸೇರಿ ಅದಕ್ಕೆ ಬೇಕಾಗುವ ಹಣ ಹೊಂದಿಸಬೇಕು ಎಂದು ಮಾತನಾಡಿರುವುದು ಆಡಿಯೋದಲ್ಲಿ ರೆಕಾರ್ಡ್ ಆಗಿದೆ.

ಕೊಡಗಿನ 50ಕ್ಕೂ ಅಧಿಕ ಸ್ಥಳಗಳು ಟಾರ್ಗೆಟ್ ಮಾಡಲಾಗಿತ್ತು. ಜತಗೆ ಮಡಿಕೇರಿ ನಗರ ಹೊತ್ತಿ ಉರಿಯುವಂತೆ ಪ್ಲಾನ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!