Mysore
18
few clouds

Social Media

ಸೋಮವಾರ, 05 ಜನವರಿ 2026
Light
Dark

ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ

ಹನೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ರಾಮಾಪುರ ಪೋಲಿಸರು ಯಶಸ್ವಿಯಾಗಿದ್ದಾರೆ.

ಹನೂರು ತಾಲೂಕಿನ ರಾಮಾಪುರ ಗ್ರಾಮದ ನಿವಾಸಿಗಳ ವೇಲು ಸ್ವಾಮಿ ಅಲಿಯಾಸ್ ಮೇಲು ಹಾಗೂ ಶಿವರಾಜ್ ಬಂದಿದ್ದ ಆರೋಪಿಗಳಾಗಿದ್ದಾರೆ.

ಘಟನೆ ವಿವರ: ಅನ್ಯ ಕಾರ್ಯನಿಮಿತ್ತ ಅಕ್ಟೋಬರ್ 19ರಂದು ತಮಿಳುನಾಡಿಗೆ ಹೋಗಿದ್ದ ವೇಳೆ ಮನೆಯಲ್ಲಿ ಚಿನ್ನಾಭರಣ ಸೇರಿದಂತೆ ನಗದು ಕಳ್ಳತನವಾಗಿರುವ ಬಗ್ಗೆ ಮಲ್ಲಿಗಾ ಎಂಬುವವರು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ರಾಮಾಪುರ ಪೋಲಿಸರು ಕಾರ್ಯ ಪ್ರವೃತ್ತರಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ ಪಿ ಶಿವಕುಮಾರ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜು, ಕೊಳ್ಳೇಗಾಲ ಉಪವಿಭಾಗ ಡಿವೈಎಸ್ಪಿ ನಾಗರಾಜ್ ರವರ ಮಾರ್ಗದರ್ಶನದಲ್ಲಿ ನಂಜುಂಡಸ್ವಾಮಿ ಎರಡು ತಂಡಗಳನ್ನು ರಚನೆ ಮಾಡಿ ತಮಿಳುನಾಡಿನ ಸೇಲಂ ಧರ್ಮಪುರಿ ಬರಗೂರು ಹಂದಿಯೂರು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ನಾಲ್ ರೋಡ್ -ಹಂದಿಯೂರು ಮುಖ್ಯ ರಸ್ತೆಯ ಮುಖ್ಯ ರಸ್ತೆಯ ಗರಿಕೆ ಕಂಡಿ ಸೇತುವೆ ಬಳಿ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ 100 ಗ್ರಾಂ ಚಿನ್ನದ ಆಭರಣಗಳು 6,000 ಬೆಲೆಯ ಬೆಳ್ಳಿ ಆಭರಣಗಳು ಹಾಗೂ 47,000 ನಗದು ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಕ್ಕೆ ಹಾಜರುಪಡಿಸಿದ್ದಾರೆ.

ಇದೆ ವೇಳೆ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್,ಎ ಎಸ್ ಐ ಗುರುಸ್ವಾಮಿ, ಮುಖ್ಯಪೇದೆಗಳಾದ ಲಿಂಗರಾಜು, ಗಿರೀಶ್, ನಾಗೇಂದ್ರ, ಪೇದೆಗಳಾದ ಲೇಯಾಖತ್ ಅಲಿಖಾನ್ ಅಮಗೊಂಡ ಬಿರಾದರ್ ಮಕಂದರ್, ಅಣ್ಣ ದೊರೆ ,ಮಹೇಂದ್ರ, ರಮೇಶ್ ಕುಮಾರ್, ಮಹದೇವಸ್ವಾಮಿ, ಚಾಲಕ ಪರಮೇಶ್ ಮತ್ತು ರಾಚಪ್ಪ ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿಪಿ ಶಿವಕುಮಾರ್ ಶ್ಲಾಘಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!