ಮಡಿಕೇರಿ : ಯುವಕನೊಬ್ಬ ಎನರ್ಜಿ ಡ್ರಿಂಕ್ ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ನಗರದ ಅಂಗಡಿಯೊಂದರಲ್ಲಿ ರೆಡ್ ಬುಲ್ ಎನರ್ಜಿ ಡ್ರಿಂಕ್ ಖರಿದಿಸಿ ಅದನ್ನು ಕುಡಿದ ಬಳಿಕ ಯುವಕ ವಿನೋದ್ ಅಸ್ವಸ್ಥನಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬಳಿಕ ರೆಡ್ ಬುಲ್ ಎನರ್ಜಿ ಡ್ರಿಂಕ್ ಟಿನ್ ನೋಡಿದಾಗ ಅದರಲ್ಲಿ ಲೊಳ್ಳೆಯಂತ ವಸ್ತು ಪತ್ತೆಯಾಗಿದೆ. ಸದ್ಯ ಯುವಕ ಪ್ರಾಣಾಪಾಯಾದಿಂದ ಪಾರಾಗಿದ್ದು, ಆತ ಕುಡಿದ ಎನರ್ಜಿ ಡ್ರಿಂಕ್‌ನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ಮಡಿಕೇರಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.