ಮೈಸೂರು: ಶ್ರೀ ಮನ್ ಮಹಾರಾಜ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸ್ಥಾಪಿಸಿದ ಮೈಸೂರು ಪೇಂಟ್ಸ್ &ವಾರ್ನಿಷ್ ಲಿ. (ಕರ್ನಾಟಕ ಸರ್ಕಾರದ ಉದ್ಯಮ) ೭೫ ವರ್ಷ ಪೂರೈಸಿರುವ ಸಂಬಂಧ ಇದೇ ೨೮ರಂದು ಅಮೃತ ಮಹೋತ್ಸವ ಜರುಗಲಿದ್ದು ಮಾನ್ಯ ಮುಖ್ಯಮಂತ್ರಿ ರವರು ಉದ್ಘಾಟಿಸಲಿರುವ ಈ ಕಾರ್ಯಕ್ರಮಕ್ಕೆ ರಾಜ ವಂಶಸ್ಥೆ ಶ್ರೀಮತಿ ಪ್ರಮೋದ ದೇವಿ ಒಡೆಯರ್ ರವರನ್ನು ಸಂಸ್ಥೆಯ ಅಧ್ಯಕ್ಷ ಆರ್. ರಘು (ಕೌಟಿಲ್ಯ) ರವರ ನೇತೃತ್ವದ ನಿಯೋಗ ಆಹ್ವಾನಿಸಿ ಸಮಾರಂಭದಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ ಸ್ವಾಮಿ, ಪ್ರಧಾನ ವ್ಯವಸ್ಥಾಕ ಹರಕುಮಾರ್ ರವರೂ ನಿಯೋಗದಲ್ಲಿದ್ದರು.