ಹುಣಸೂರಲ್ಲಿ ಶುಕ್ರವಾರ ಬೆಳಗ್ಗೆ 6.30ಕ್ಕೆ ಗುಡ್ಡಗಾಡು ಓಟ.
ಹುಣಸೂರು: ಹುಣಸೂರಿನಲ್ಲಿ ಡಿ.2ರ ಶುಕ್ರವಾರ ನಡೆಯಲಿರುವ ಮೈಸೂರು ವಿ.ವಿ.ಯ ಮಹಿಳಾ ಮತ್ತು ಪುರುಷರ ಕ್ರಾಸ್ ಕಂಟ್ರಿ(ಗುಡ್ಡಗಾಡು ಓಟ)ಸ್ಪರ್ಧೆಯಲ್ಲಿ 72 ಕಾಲೇಜುಗಳಲ್ಲಿ 191 ಮಹಿಳೆಯರು, 290 ಪುರುಷ ಓಟಗಾರರು ಸೇರಿ ಒಟ್ಟು 481ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.
ಇಲ್ಲಿನ ಮಹಿಳಾ ಸರಕಾರಿ ಪದವಿ ಕಾಲೇಜಿನಿಂದ ನಡೆಯುತ್ತಿರುವ ಈ ಸ್ಪರ್ಧೆ ಶುಕ್ರವಾರ ಬೆಳಗ್ಗೆ 6.30ಕ್ಕೆ ಎಚ್.ಡಿ.ಕೋಟೆ ವೃತ್ತದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಸ್ಪರ್ಧೆಗೆ ಚಾಲನೆ ನೀಡಿದರು, ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಡಾ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಉಪ ವಿಭಾಗಾಧಿಕಾರಿ ರುಚಿಬಿಂದಾಲ್, ಡಿವೈಎಸ್ ರವಿಪ್ರಸಾದ್ ರವಿಪ್ರಸಾದ್ , ಡಾ.ಸರ್ವೇಶ್‌ರಾಜೇಅರಸ್ ಎಟ್ ಹಾಜರಿದ್ದಾರೆ. ನಗರದ ಹೊರವಲಯ ಸೇರಿದಂತೆ ವಿವಿಧ ವೃತ್ತಗಳ ಮೂಲಕ 10ಕಿ.ಮೀಟವನ್ನು ಪೂರೈಸಬೇಕಿದ್ದು, ಮಹಿಳಾ ಕಾಲೇಜಿನ ಸ್ಪರ್ಧೆ ಅಂತ್ಯಗೊಳ್ಳಲಿದೆ. ಮೈಸೂರು ವಿವಿಯ ದೈಹಿಕಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಪಿ.ಕೃಷ್ಣಯ್ಯರ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ನೂರು ಮಂದಿ ಅಧಿಕಾರಿಗಳ ತಂಡ ಹಾಗೂ ನೂರಕ್ಕೂ ಹೆಚ್ಚು ಸ್ಪಯಂಸೇವಕರು ಸ್ಪರ್ಧೆ ನಡೆಸಲಿದ್ದಾರೆ.
ಬೆಳಗ್ಗೆ 10ಕ್ಕೆ ಕಾಲೇಜು ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ, ಸಿಡಿಸಿ ಅಧ್ಯಕ್ಷರೂ ಆದ ಶಾಸಕ ಮಂಜುನಾಥ್ ಬಹುಮಾನ ವಿತರಿಸಿದರು. ಅಂತರಾಷ್ಟ್ರೀಯ ಟ್ರಯಥ್ಲಾನ್ ಆಟಗಾರ್ತಿ ಡಾ.ಉಷಾಹೆಗ್ಗಡೆ ಸಮಾರೋಪ ಭಾಷಣ ಮಾಡುತ್ತಾರೆ. ನಗರಸಭೆ ಅಧ್ಯಕ್ಷೆ ಗೀತಾನಿಂಗರಾಜು, ಸದಸ್ಯ ಶ್ರೀನಾಥ್, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಎಸ್.ಬಿ.ಅಪ್ಪಾಜಿಗೌಡ, ಪ್ರಾಚಾರ್ಯ ಜ್ಞಾನಪ್ರಕಾಶ್, ಸಿಡಿಸಿ ಸದಸ್ಯರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬಾಸ್ಕರ್.





