Mysore
28
clear sky

Social Media

ಬುಧವಾರ, 28 ಜನವರಿ 2026
Light
Dark

ಮಂಡ್ಯ ಜಿಲ್ಲೆಯಿಂದ `ಕೈ’ ಟಿಕೆಟ್ ಬಯಸಿ 43 ಮಂದಿ ಅರ್ಜಿ ಸಲ್ಲಿಕೆ

ಮಂಡ್ಯ ಕ್ಷೇತ್ರವೊಂದರಿಂದಲೇ 17 ಮಂದಿ; ನಾಗಮಂಗಲದಿಂದ ಸಿಆರ್‌ಎಸ್ ಮಾತ್ರ

ಮಂಡ್ಯ: ಮಂಡ್ಯ ಜಿಲ್ಲೆಯ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್ ಟಿಕೆಟ್ ಬಯಸಿ ೪೩ ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರವೊಂದರಿಂದಲೇ `ಕೈ’ ಟಿಕೆಟ್ ಪಡೆಯಲು ೧೬ ಮಂದಿ ಅರ್ಜಿ ಸಲ್ಲಿಸಿರುವುದು ವಿಶೇಷವಾಗಿದೆ.

ಮಂಡ್ಯ ಕ್ಷೇತ್ರ:

ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕ ಎಚ್.ಬಿ. ರಾಮು, ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್ (ಶಿವಪ್ಪ), ಕಾಂಗ್ರೆಸ್ ಮುಖಂಡರಾದ ಕೆ.ಕೆ.ರಾಧಾಕೃಷ್ಣ, ಗಣಿಗ ರವಿಕುಮಾರ್, ಕಾವೇರಿ ನರ್ಸಿಂಗ್ ಹೋಂನ ಡಾ.ಕೃಷ್ಣ, ಸಿದ್ದಾರೂಢ ಸತೀಶ್‌ಗೌಡ, ಎಂ.ಎಸ್ ಚಿದಂಬರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಮೈಶುಗರ್ ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ, ಅಮರಾವತಿ ಚಂದ್ರಶೇಖರ್, ಜಿ.ಪಂ. ಮಾಜಿ ಸದಸ್ಯ ಬಿ.ಸಿ. ಶಿವಾನಂದ, ಬೆಂಗಳೂರು ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ಹನಕೆರೆ ಶಿವರಾಮ್, ಹಾಲಹಳ್ಳಿ ಅಶೋಕ್, ಅಸಾದುಲ್ಲಾಖಾನ್, ಹೊಸಹಳ್ಳಿ ಶಿವಲಿಂಗೇಗೌಡ ಕಾಂಗ್ರೆಸ್ ಟಿಕೆಟ್ ಬಯಸಿ ೨ ಲಕ್ಷ ರೂ.ಗಳ ಡಿಡಿಯೊಂದಿಗೆ ಅರ್ಜಿ ಸಲ್ಲಿಸಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಬ್ಬರು, ಮೂವರು, ಹೆಚ್ಚೆಂದರೆ ಐದಾರು ಮಂದಿ ಆಕಾಂಕ್ಷಿಗಳಿದ್ದರು. ಆದರೆ ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಬರೋಬ್ಬರಿ ೧೬ ಮಂದಿ ಟಿಕೆಟ್ ಬೇಕೆಂದು ಅರ್ಜಿ ಸಲ್ಲಿಸಿರುವುದು ಜನರ ಕುತೂಹಲ ಕೆರಳಿಸಿದೆ. ಇಷ್ಟು ಜನರಲ್ಲಿ ಅಂತಿಮ ಅಭ್ಯರ್ಥಿ ಯಾರಾಗಬಹುದೆಂಬುದು ಯಕ್ಷ ಪ್ರಶ್ನೆಯಾಗಿದೆ.

ಮದ್ದೂರು ಕ್ಷೇತ್ರ:

ಮದ್ದೂರು ಕ್ಷೇತ್ರದಿಂದ ಮೂರು ಮಂದಿ ಅರ್ಜಿ ಸಲ್ಲಿಸಿದ್ದು, ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯಲು ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು, ಅಂತೆಯೇ ಮಾಜಿ ಶಾಸಕ ಬಿ.ರಾಮಕೃಷ್ಣ, ಶಂಕರೇಗೌಡ ಅರ್ಜಿ ಸಲ್ಲಿಸಿದ್ದಾರೆ.

ಮಳವಳ್ಳಿ ಕ್ಷೇತ್ರ:

ಮಳವಳ್ಳಿ ಕ್ಷೇತ್ರದಿಂದ ಮಾಜಿ ಸಚಿವ ಪಿ.ಎಂ.ನರೇAದ್ರಸ್ವಾಮಿ, ಮಾಜಿ ಶಾಸಕಿ ಮಲ್ಲಾಜಮ್ಮ, ಡಾ. ಮೂರ್ತಿ ಅರ್ಜಿ ಸಲ್ಲಿಸಿರುವ ಪ್ರಮುಖರು.

ನಾಗಮಂಗಲ ಕ್ಷೇತ್ರ:

ನಾಗಮಂಗಲ ಕ್ಷೇತ್ರದ `ಕೈ’ನಲ್ಲಿ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೊರತುಪಡಿಸಿ ಬೇರಾರು ಸ್ಪರ್ಧಾಕಾಂಕ್ಷಿಗಳಿಲ್ಲವಾಗಿದ್ದು, ಕ್ಷೇತ್ರದಿಂದ ಇವರೊಬ್ಬರೇ ಅರ್ಜಿ ಹಾಕಿದ್ದಾರೆ.

ಪಾಂಡವಪುರ: ಡಾ. ಎಚ್.ಎನ್. ರವೀಂದ್ರ, ಜಿಪಂ ಮಾಜಿ ಸದಸ್ಯ ಎನ್.ತ್ಯಾಗರಾಜು, ಕಾಗೇಪುರ ಆನಂದ, ನಾಗಭೂಷಣ್, ಸಚಿನ್ ಮಿಗ.

ಕೆ.ಆರ್.ಪೇಟೆ: ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ. ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ನಾಗೇಂದ್ರ ಕುಮಾರ್, ಜಿಪಂ ಮಾಜಿ ಸದಸ್ಯ ಎಂ.ಡಿ.ಕೃಷ್ಣಮೂರ್ತಿ, ಮುಖಂಡ ವಿಜಯ್ ರಾಮೇಗೌಡ.

ಶ್ರೀರಂಗಪಟ್ಟಣ: ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ವಕೀಲ ಪುಟ್ಟೇಗೌಡ, ಪಾಲಹಳ್ಳಿ ಚಂದ್ರಶೇಖರ್.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!