Mysore
17
broken clouds

Social Media

ಮಂಗಳವಾರ, 06 ಜನವರಿ 2026
Light
Dark

ಕುಟುಂಬ ವೈದ್ಯರ 3ನೇ ರಾಜ್ಯಮಟ್ಟದ ಸಮ್ಮೇಳನ

ಮೈಸೂರು: ಅಕಾಡೆಮಿ ಆಫ್ ಫ್ಯಾಮಿಲಿ ಫಿಸಿಶಿಯನ್ಸ್ ಆಫ್ ಇಂಡಿಯಾದ ವತಿಯಿಂದ ಡಿ.೧೦ ಮತ್ತು ೧೧ರಂದು ಮೈಸೂರಿನಲ್ಲಿ ೩ನೇ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಸಂಯೋಜಕ ಡಾ.ರವಿಕುಮಾರ್ ಕುಲಕರ್ಣಿ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ಶಿವರಾತ್ರಿ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಎರಡು ದಿನಗಳವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ೨೦೦ಕ್ಕೂ ಹೆಚ್ಚು ವೈದ್ಯರು ಭಾಗವಹಿಸಲಿದ್ದಾರೆ. ವೈದ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ನೀತಿ ನಿರೂಪಕರುಗಳಿಗೆ ಗುಣಮಟ್ಟದ ಫ್ಯಾಮಿಲಿ ಮೆಡಿಸಿನ್ ಅಪ್‌ಡೇಟ್ ಆಗಿ ಕಾರ್ಯನಿರ್ವಹಿಸುತ್ತದೆ. ಉಪನ್ಯಾಸ, ಕಾರ್ಯಾಗಾರ, ರೋಲ್ ಪ್ಲೇ, ಪ್ಯಾನಲ್ ಚರ್ಚೆ, ರಸಪ್ರಶ್ನೆ ಮತ್ತು ನೀತಿ ಚರ್ಚೆಗಳು ನಡೆಯಲಿವೆ ಎಂದು ವಿವರಿಸಿದರು.

ಡಿ.೧೦ರಂದು ಮಧ್ಯಾಹ್ನ ೧೨ಕ್ಕೆ ಯುವ ವೈದ್ಯರ ಸಮಾವೇಶವನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ರವಿ ಉದ್ಘಾಟಿಸಲಿದ್ದಾರೆ. ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ಆರ್.ದಾಕ್ಷಾಯಿಣಿ, ಎಎಫ್‌ಪಿಐ ರಾಷ್ಟ್ರೀಯ ಅಧ್ಯಕ್ಷ ಡಾ.ರಮಣ ಕುಮಾರ್, ಚುನಾಯಿತ ಅಧ್ಯಕ್ಷ ಡಾ.ಮೋಹನ್ ಕುಬೇಂದ್ರ ಭಾಗವಹಿಸಲಿದ್ದಾರೆ. ಡಿ.೧೧ರಂದು ಮಧ್ಯಾಹ್ನ ೧೨ಕ್ಕೆ ೩ನೇ ರಾಜ್ಯಮಟ್ಟದ ಸಮ್ಮೇಳನವನ್ನು ಜೆಎಸ್‌ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು ಉದ್ಘಾಟಿಸಲಿದ್ದು, ಡಾ.ಆರ್.ಬಾಲಸುಬ್ರಹ್ಮಣ್ಯಂ, ಡಾ.ಎಚ್.ಕೆ.ಪ್ರಸಾದ್, ಡಾ.ಕೆ.ನಾಗೇಂದ್ರ ಪ್ರಸಾದ್, ಡಾ.ವೈ.ಎಂ.ಶಿವಕುಮಾರ್, ಎಎಫ್‌ಪಿಐ ರಾಷ್ಟ್ರೀಯ ಅಧ್ಯಕ್ಷ ಡಾ.ರಮಣ ಕುಮಾರ್ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸಂಘದ ಕಾರ್ಯದರ್ಶಿ ಡಾ.ಜಿ.ಎನ್.ಇಂಪನ, ಖಜಾಂಚಿ ಡಾ.ವೀಣಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!