Mysore
19
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಸ್ನೇಹಿತರೊಂದಿಗೆ ಈಜಲು ಹೋದ ಯುವಕ ನೀರುಪಾಲು

ಸರಗೂರು: ಸ್ನೇಹಿತರೊಂದಿಗೆ ಈಜಲು ಹೋದ ಯುವಕನೋರ್ವ ಕಪಿಲ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಂಬಸೋಗೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಮೈಸೂರಿನ ರಾಘವೇಂದ್ರನಗರದ ನಿವಾಸಿ ಕೃಷ್ಣ ಎಂಬುವರ ಪುತ್ರ ಹರೀಶ್ (34) ಮೃತ ದುರ್ದೈವಿ. ಈತ ಸ್ನೇಹಿತ ಗಣೇಶನೊಡನೆ ಆಟೋದಲ್ಲಿ ಸುತ್ತಾಡಿ ಬರುವುದಾಗಿ ಮೈಸೂರಿನಿಂದ ಬಂದಿದ್ದಾರೆ ಎನ್ನಲಾಗಿದ್ದು, ಸಮೀಪದ ತುಂಬಸೋಗೆ ಗ್ರಾಮದ ಬಳಿ ಇರುವ ಕಪಿಲ ನದಿ ಸೇತುವೆ ಎಡ ಭಾಗದ ನದಿ ದಡದಲ್ಲಿ ಆಟೋ ನಿಲ್ಲಿಸಿದ್ದಾರೆ. ನಂತರ ಗಣೇಶ ಬಹಿರ್ದೆಸೆಗೆ ಹೋಗಿದ್ದು, ಹರೀಶ್ ನದಿಯಲ್ಲಿ ಈಜಲು ಮುಂದಾಗಿದ್ದಾರೆ.

ನದಿ ಆಳವಾಗಿದ್ದರಿಂದ ಈಜಲಾಗದೆ ಮುಳುಗಿ ಸಾವನ್ನಪಿದ್ದಾನೆ. ಘಟನಾ ಸ್ಥಳದ ಪಕ್ಕದಲ್ಲೇ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ವಿಷಯ ತಿಳಿದು ಜೋರಾಗಿ ಕೂಗಿಕೊಂಡಿದ್ದಾರೆ.

ವಿಷಯ ತಿಳಿದು ಗ್ರಾಮಸ್ಥರು, ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಅಗ್ನಿ ಶಾಮಕ ದಳದ ಸಿಬ್ಬಂದಿ, ಈಜು ತಜ್ಞರ ಸಹಾಯದಿಂದ ಮೃತದೇಹವನ್ನು ಹೊರ ತೆಗೆದಿದ್ದು, ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ ಎಂದು ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಗೋಪಾಲ್ ತಿಳಿಸಿದ್ದಾರೆ. ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ