Mysore
20
overcast clouds
Light
Dark

ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದೆ ಎಂದು ಗಾಬರಿಗೊಂಡ ವಿದ್ಯಾರ್ಥಿಗಳು

ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದೆ ಎಂದು 30ಕ್ಕೂ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಘಟನೆ ನಂಜನಗೂಡಿನ ಸಾಲುಂಡಿ ಗ್ರಾಮದಲ್ಲಿ ನಡೆದಿದೆ.

ಸಾಲುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ( ಜನವರಿ 19 ) ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಯೊಬ್ಬಳು ಹಲ್ಲಿಯಾಕಾರಾದ ತರಕಾರಿ ನೋಡಿ ಮುಖ್ಯ ಶಿಕ್ಷಕರಿಗೆ ತೋರಿಸೊದ್ದಾಳೆ. ಆದರೆ ಅದು ಹಲ್ಲಿಯಲ್ಲ ತರಾಕರಿ ಎಂದು ಮುಖ್ಯ ಶಿಕ್ಷಕರು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ವಿದ್ಯಾರ್ಥಿಗಳು ವಿಷಯವನ್ನು ಪೋಷಕರಿಗೆ ತಿಳಿಸಿದ್ದು ಗಾಬರಿಯಾದ ಪೋಷಕರು ಮಕ್ಕಳನ್ನು ತಿ‌ ನರಸೀಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. 

 ಆಸ್ಪತ್ರೆಗೆ ಡಿ ಎಚ್ ಒ ಡಾ ಕುಮಾರಸ್ವಾಮಿ, ನಂಜನಗೂಡು ತಹಶಿಲ್ದಾರ್ ಶಿವಕುಮಾರ್ ಕಾಸ್ನೂರು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ತಿ ನರಸೀಪುರ ತಹಶಿಲ್ದಾರ್ ಸುರೇಶ್ ಆಚಾರ್ ಭೇಟಿ ನೀಡಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ