Mysore
14
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಸಾಗರಕಟ್ಟೆ ಹಿನ್ನೀರಿನಲ್ಲಿ ಯುವಕರಿಬ್ಬರ ಮೃತದೇಹ ಪತ್ತೆ

ಮೈಸೂರು ಜಿಲ್ಲೆ ಕೆಆರ್‌ ನಗರ ತಾಲೂಕಿನ ಸಾಗರಕಟ್ಟೆ ಹಿನ್ನೀರಿನಲ್ಲಿ ಇಂದು ಯುವಕರಿಬ್ಬರ ಶವಗಳು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದವು. ಮೃತದೇಹಗಳು ಪ್ಲಾಸ್ಟಿಕ್‌ ಚೀಲಗಳಲ್ಲಿ ದೊರೆತಿದ್ದು ಕಿಡಿಗೇಡಿಗಳು ಕೊಲೆ ಮಾಡಿ ಹಿನ್ನೀರಿಗೆ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಸೀಮಾ ಲಾಟ್ಕರ್‌, ಹೆಚ್ಚುವರಿ ಎಸ್‌ಪಿ ನಂದಿನಿ, ಡಿವೈಎಸ್‌ಪಿ ಕರೀಂ ರಾವತ್‌ ಹಾಗೂ ಕೆಆರ್‌ ನಗರ ಠಾಣೆಯ ಇನ್‌ಸ್ಪೆಕ್ಟರ್‌ ಸಂತೋಷ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತರ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಇನ್ನು ಮೃತರ ಪೈಕಿ ಓರ್ವನ ಕೈನಲ್ಲಿ “ನಾಗರಾಜನ್‌ VR POSTER 4B LEGEND” ಎಂಬ ಬರಹವಿರುವುದು ಕಂಡುಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!