ಮಂಡ್ಯ: ಸಂಕ್ರಾಂತಿ ಹಬ್ಬದ ಸಡಗರದ ಸನಿಹದಲ್ಲಿಯೇ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿ ಸಮೀಪದ ಶಿಂಷಾ ಸೇತುವೆ ಬಳಿ ನಡೆದಿದೆ.
ಮೃತರನ್ನು ಮ್ಯಾನೇಜರ್ ಶಂಕರ್ ಹಾಗೂ ಮಹಾದೇವು ಎಂದು ಗುರುತಿಸಲಾಗಿದ್ದು ತೀವ್ರವಾಗಿ ಗಾಯಗೊಂಡಿರುವ ಕಿಶೋರ್ ಎಂಬುವವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬೆಂಗಳೂರಿನವರು ಎಂದು ತಿಳಿದುಬಂದಿದ್ದು ಐಸಿಸಿಐ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಮೈಸೂರಿನಿಂದ ಬೆಂಗಳೂರಿಗೆ ದಶಪಥ ಹೆದ್ದಾರಿಯಲ್ಲಿ ತೆರಳುವಾಗ ಶಿಂಷಾ ಸೇತುವೆ ಮೇಲೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರು ಮಗುಚಿ ಬಿದ್ದಿದೆ.