ಬೆಂಗಳೂರು: ಪವಿತ್ರಾ ಗೌಡಗೆ ಆಶ್ಲೀಲವಾಗಿ ಮೆಸೇಜ್ ಕಳಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಕೊಲೆ ಮಾಡಿದ ಆರೋಪದಡಿ ದರ್ಶನ್ ಜೈಲು ಸೇರಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆಗಿರುವ ಅವರಿಗೆ 6106 ಖೈದಿ ನಂಬರ್ ಕೊಡಲಾಗಿದೆ. ಈ ಸಂಖ್ಯೆಯಲ್ಲೇ ತಮ್ಮ ಹೊಸ ವಾಹನಗಳನ್ನು ನೋಂದಣಿ ಮಾಡಿಸಿಕೊಳ್ಳಲು ಕೆಲ ಅಭಿಮಾನಿಗಳು ಮುಂದಾಗಿದ್ದಾರೆ.
ಏನೇ ಆಗಲಿ ನಟ ದರ್ಶನ್‌ರನ್ನು ಪ್ರೀತಿಸುವ ಅಪಾರ ಅಭಿಮಾನಿಗಳು ಇಡೀ ದೇಶದಲ್ಲಿದ್ದಾರೆ. ಎಂಥದ್ದೇ ಸಂದರ್ಭದಲ್ಲೂ ಅವರನ್ನು ಬಿಟ್ಟುಕೊಡುವುದಿಲ್ಲ ಎಂಬ ಜನರೂ ಸಹ ಇದ್ದಾರೆ. ಅಚ್ಚರಿಯೆಂದರೆ ದರ್ಶನ್‌ಗೆ ಜೈಲಿನಲ್ಲಿ ನೀಡಿದ ಖೈದಿ ನಂಬರ್ ಕೂಡ ಈಗ ಅಭಿಮಾನಿಗಳ ಪಾಲಿನ ಲಕ್ಕಿ ನಂಬರ್ ಆಗುತ್ತಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ವಿಚಾರಣಾಧೀನ ಖೈದಿ ಆಗಿದ್ದಾರೆ. ಅವರಿಗೆ 6106 ಖೈದಿ ನಂಬರ್ ನೀಡಲಾಗಿದೆ. ಈ ನಂಬರ್ ಮೇಲೆ ಕೆಲವು ಅಭಿಮಾನಿಗಳಿಗೆ ಆಕರ್ಷಣೆ ಹೆಚ್ಚಿದ್ದು, ಈ ನಂಬರ್‌ನಲ್ಲೇ ಹೊಸ ವಾಹನಗಳನ್ನು ನೋಂದಣಿ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.