ಹಾಸನ: ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ, ವಕೀಲ ದೇವರಾಜಗೌಡ ಅವರ ನ್ಯಾಯಾಂಗ ಬಂಧನ ವಿಸ್ತರಿಸಿ ಹಾಸನ ನ್ಯಾಯಾಲಯ ಆದೇಶ ಹೊರಡಿಸಿದೆ.
ಇಲ್ಲಿನ ಎರಡನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೂನ್.7 ವರಗೆ ಅಂದರೆ 14 ದಿನಗಳ ವರೆಗೆ ಎಸ್‌ಐಟಿ ಬಂಧನಕ್ಕೊಪ್ಪಿಸಿ ಆದೇಶ ನೀಡಿದೆ.
ಹೊಳೆ ನರಸೀಪುರ ಜೆಎಂಎಫ್‌ಸಿ ನ್ಯಾಯಾಲಯ ಇದೇ ಮೇ.11ರಂದು ದೇವರಾಜೇಗೌಡನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು. ಹಾಗೂ ಹೆಚ್ಚುವರಿ 4 ದಿನಗಳು ವಿಚಾರಣೆಗೆ ಅನುಮತಿ ನೀಡುವಂತೆ ಎಸ್‌ಐಟಿ ಅನುಮತಿ ಪಡೆದಿತ್ತು. ಅದರಂತೆ ಇಂದು ಅವರ ಬಂಧನದ ಅವಧಿ ಮುಕ್ತಾಗೊಂಡ ಹಿನ್ನಲೆ ದೇವರಾಜೇಗೌಡರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಇದಾದ ನಂತರ ಮತ್ತೆ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಿ ಕೋರ್ಟ್ ಆದೇಶ ನೀಡಿದೆ. ಉಳಿದಂತೆ ದೇವರಾಜೇಗೌಡರ ಜಾಮೀನು ಅರ್ಜಿ ಇದೇ ಮೇ.28ಕ್ಕೆ ನಡೆಯಲಿದೆ. ಮೇ.11 ರಂದು ದೇವರಾಜೇಗೌಡರನ್ನು ಬಂಧಿಸಲಾಗಿತ್ತು.