Mysore
30
overcast clouds

Social Media

ಭಾನುವಾರ, 12 ಏಪ್ರಿಲ 2026
Light
Dark

ಹಾಸನ ಅಶ್ಲೀಲ ವಿಡಿಯೋ ಪ್ರಕರಣ: ಫೋಟೊ ಹರಿಬಿಟ್ಟಿದ್ದ ಟ್ರೋಲ್‌ ಪೇಜ್‌ ಅಡ್ಮಿನ್ ಬಂಧನ

ಚಿಕ್ಕಮಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಮತ್ತು ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಕುದುರೆಮುಖ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್‌ ಬಂಧಿತ ಆರೋಪಿ. ಟ್ರೋಲ್‌ ಪೇಜ್‌ ಅಡ್ಮಿನ್‌ ಆಗಿದ್ದ ಆರೋಪಿ ಪ್ರಜ್ವಲ್‌ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಎಂದು ಫೇಸ್ಬುಕ್‌, ಯೂಟ್ಯೂಬ್‌, ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದ. ಆರೋಪಿ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 67,67(ಎ) ಕಲಂ ಅಡಿಯಲ್ಲಿ ದೂರು ದಾಖಲಾಗಿದೆ.

ಮೊದಲಿಗೆ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದ ಆರೋಪಿ ವಿಡಿಯೊಗಳಿಗಾಗಿ ಹಣ ನೀಡುವಂತೆ ಬೇಡಿಕೆಯನ್ನೂ ಸಹ ಸಂದೇಶಗಳ ಮತ್ತು ಪೋಸ್ಟ್‌ಗಳ ಮೂಲಕ ಇಡುತ್ತಿದ್ದ ಎನ್ನಲಾಗಿದೆ.

Tags:
error: Content is protected !!