Mysore
15
few clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಅತ್ಮಹತ್ಯೆ ಪ್ರಕರಣ: ಜಿಪಂ ಸಿಇಒ ಗೆ ಕ್ಲೀನ್‌ ಚಿಟ್‌!

ಮೈಸೂರು: ಕೋವಿಡ್‌ ಸಮಯದಲ್ಲಿ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿಗೆ ನ್ಯಾಯಾಲಯ ಕ್ಲೀನ್‌ ಚಿಟ್‌ ನೀಡಿದೆ.

ನಂಜನಗೂಡಿನ ಟಿಎಚ್‌ಓ ನಾಗೇಂದ್ರ ಅವರು ಕೋವಿಡ್‌ ವೇಳೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇವರು ಆತ್ಮಹತ್ಯೆಗೆ ಶರಣಾಗಲು ಜಿಪಂ ಸಿಇಒ ಕಾರಣ ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ಸಿಇಒ ಪ್ರಶಾಂತ್‌ ಮಿಶ್ರಾ ಅವರ ಕಿರುಕುಳದಿಂದಲೇ ನಾಗೇಂದ್ರ ಅವರು ಮರಣ ಹೊಂದಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿತ್ತು.

ಈ ಹಿನ್ನಲೆ ಮಿಶ್ರಾ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಹಾಗೂ ಕಿರಿಕುಳ ಸಂಬಂಧ ಮೈಸೂರಿನ ಆಲನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕಣ ದಾಖಲಾಗಿತ್ತು.

ಈ ಪ್ರಕರಣ ತನಿಖೆ ನಡೆಸಿದ ಪೊಲೀಸರು ಬಿ-ರಿಪೋರ್ಟ್‌ ನೀಡಿದ್ದರು. ಅದರಲ್ಲಿ ಪ್ರಶಾಂತ್‌ ಮಿಶ್ರಾ ಅವರ ಪರವಾಗಿದ್ದರಿಂದ ಈ ವರದಿ ವಿರೋಧಿಸಿ ನಾಗೇಂದ್ರ ಅವರ ಮಡದಿ ನ್ಯಾಯಾಲಯದಲ್ಲಿ ಪ್ರೊಟೆಸ್ಟ್‌ ಅರ್ಜಿ ಸಲ್ಲಿಸಿದ್ದರು.

ಇನ್ನು ಈ ಅರ್ಜಿ ವಿಚಾರಣೆ ನಡೆಸಿದ ನಗರದ ಮೂರನೇ ಸಿವಿಲ್‌ ನ್ಯಾಯಲಯ, ಪೊಲೀಸರ ಬಿ-ರಿಪೋರ್ಟ್‌ನ್ನು ಎತ್ತಿ ಹಿಡಿಯಿತು ಹಾಗೂ ಪ್ರಶಾಂತ್‌ ಮಿಶ್ರಾ ಅವರ ಮೇಲಿನ ಆರೋಪಗಳು ನಿರಾಧಾರ ಎಂದು ಕೋರ್ಟ್‌ ಹೇಳಿತು.

Tags:
error: Content is protected !!