Mysore
20
overcast clouds
Light
Dark

ಶ್ರಮಶಕ್ತಿ ಯೋಜನೆಯಲ್ಲಿ ಸಾಲ ಪಡೆಯಲು ಏನೆಲ್ಲಾ ಅರ್ಹತೆ ಇರಬೇಕು?

ರಾಜ್ಯ ಕಾಂಗ್ರೆಸ್‌ ಸರ್ಕಾರ ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದ್ದು, ಇನ್ನೂ ಸಹ ಯುವನಿಧಿ ಯೋಜನೆಯನ್ನು ಜಾರಿಗೆ ತರುವುದು ಬಾಕಿ ಇದೆ. ಹೀಗಿರುವಾಗ ಸಿದ್ದರಾಮಯ್ಯ ನಾಯಕತ್ವದ ಮತ್ತೊಂದು ಯೋಜನೆ ಶ್ರಮಶಕ್ತಿಯಡಿಯಲ್ಲಿ ಸಾಲ ಪಡೆದುಕೊಂಡು ತಮ್ಮದೇ ಸ್ವಂತ ವ್ಯವಹಾರ ಸ್ಥಾಪಿಸಬಹುದಾಗಿದೆ.

ಅಲ್ಪಸಂಖ್ಯಾತರ ಸಮುದಾಯದ ಅನುಕೂಲಕ್ಕಾಗಿ ಘೋಷಿಸಿದ್ದ ಶ್ರಮಶಕ್ತಿ ಯೋಜನೆಯಡಿಯಲ್ಲಿ ಸರ್ಕಾರವು ಅಲ್ಪಸಂಖ್ಯಾತ ವರ್ಗದ ಜನರಿಗೆ ತಮ್ಮ ವ್ಯವಹಾರಗಳನ್ನು ಆರಂಭಿಸಲು ಕಡಿಮೆ ಬಡ್ಡಿ ದರದಲ್ಲಿ ಹಣದ ಸೌಲಭ್ಯ ಹಾಗೂ ಕೌಶಲ್ಯ ತರಬೇತಿಯನ್ನು ನೀಡುತ್ತಿದೆ. ಹಾಗಿದ್ದರೆ ಈ ಯೋಜನೆ ಫಲಾನುಭವಿಯಾಗಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಇದರಲ್ಲಿ ಎಷ್ಟು ಹಣ ಎಷ್ಟು ಬಡ್ಡಿ ದರದಲ್ಲಿ ಸಿಗಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಎಷ್ಟು ಹಣ? ಬಡ್ಡಿ ಎಷ್ಟು?

ಈ ಯೋಜನೆಯಡಿಯಲ್ಲಿ ಸರ್ಕಾರ ಅರ್ಹ ಅಲ್ಪಸಂಖ್ಯಾತ ಸದಸ್ಯನಿಗೆ 50000 ರೂಪಾಯಿಗಳನ್ನು ಸಾಲವನ್ನಾಗಿ ನೀಡಲಿದೆ. ಈ ಮೊತ್ತವನ್ನು 36 ತಿಂಗಳಿನೊಳಗೆ ಮರುಪಾವತಿ ಮಾಡಬೇಕಿದೆ. 4% ಬಡ್ಡಿ ದರದಲ್ಲಿ ಈ ಸಾಲವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

* ಅರ್ಜಿದಾರ ಕರ್ನಾಟಕದಲ್ಲಿ ಶಾಶ್ವತವಾಗಿ ನೆಲೆಸಿರಬೇಕು
* ಅರ್ಜಿದಾರನ ವಯೋಮಿತಿ 18 ರಿಂದ 55 ವರ್ಷಗಳಾಗಿರಬೇಕು
* ಅರ್ಜಿದಾರನ ವಾರ್ಷಿಕ ಆದಾಯ 3.50 ಲಕ್ಷ ರೂಪಾಯಿಗಳನ್ನು ಮೀರಬಾರದು.
* ಅಭ್ಯರ್ಥಿಯು ಬೌದ್ಧ, ಮುಸ್ಲಿಂ, ಕ್ರಿಸ್ಟಿಯನ್, ಜೈನ್‌, ಸಿಖ್‌ ಹಾಗೂ ಪಾರ್ಸಿ ರೀತಿಯ ಅಲ್ಪಸಂಖ್ಯಾತರ ಗುಂಪಿಗೆ ಸೇರಿದ ಸದಸ್ಯನಾಗಿರಬೇಕು.
* ಅಭ್ಯರ್ಥಿಯ ಕುಟುಂಬ ಸದಸ್ಯರು ಕೇಂದ್ರ, ರಾಜ್ಯ ಹಾಗೂ ಸರ್ಕಾರದ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ಅಂತಹ ಅಭ್ಯರ್ಥಿ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅನರ್ಹನಾಗಿರುತ್ತಾನೆ.
* ಅರ್ಜಿದಾರ ಕೆಎಂಡಿಸಿ ಸಾಲಗಳನ್ನು ಮರುಪಾವತಿ ಮಾಡಿರಬೇಕು. ಒಂದುವೇಳೆ ಸಾಲ ಮರುಪಾವತಿ ಮಾಡಿರದಿದ್ದರೆ ಅಂತಹ ಅರ್ಜಿದಾರ ಅನರ್ಹನಾಗುತ್ತಾನೆ.
* ಅಭ್ಯರ್ಥಿಯ ಕುಟುಂಬದ ಯಾವುದೇ ಇತರೆ ಸದಸ್ಯರು ಕಳೆದ ಐದು ವರ್ಷಗಳಲ್ಲಿ ಕೆಎಂಡಿಸಿಎಲ್‌ ಕಾರ್ಯಕ್ರಮದಿಂದ ಪ್ರಯೋಜನ ಪಡೆದುಕೊಂಡಿರಬಾರದು.

ಅರ್ಜಿದಾರ ಸಲ್ಲಿಸಬೇಕಾದ ದಾಖಲೆಗಳು: ಪಾಸ್‌ಪೋರ್ಟ್‌ ಸೈಜಿನ ಫೋಟೊ, ಆಧಾರ್‌ ಕಾರ್ಡ್‌, ಆದಾಯ ಪ್ರಮಾಣ ಪತ್ರ, ಯೋಜನಾ ವರದಿ, ಶ್ಯೂರಿಟಿ ಸ್ವಯಂ ಘೋಷಣೆ ನಮೂನೆ, ಸ್ವಯಂ ಘೋಷಣೆ ನಮೂನೆ, ಬ್ಯಾಂಕ್‌ ಖಾತೆ ವಿವರಗಳು, ಕರ್ನಾಟಕದ ನಿವಾಸ ಪುರಾವೆ, ಆನ್‌ಲೈನ್‌ ಅರ್ಜಿ ನಮೂನೆ, ಜಾತಿ ಪ್ರಮಾಣಪತ್ರಮ ಮತ್ತು ಅಲ್ಪಸಂಖ್ಯಾತರ ಪ್ರಮಾಣ ಪತ್ರ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ