ಮುಂಬೈ: ಡಾಲರ್ ಎದುರು ಸತತವಾಗಿ ದುರ್ಬಲಗೊಂಡು ತೀವ್ರ ನಷ್ಟ ಅನುಭವಿಸಿದ್ದ ರೂಪಾಯಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 8 ಪೈಸೆಯಷ್ಟು ಹೆಚ್ಚಳವಾಗಿ ಚೇತರಿಕೆ ದಾಖಲಿಸಿದೆ. ಸದ್ಯ ಡಾಲರ್ ಎದುರು ಭಾರತದ ರೂಪಾಯಿ 81.25 ರಷ್ಟಿದೆ.
2 ದಿನಗಳ ಹಿಂದೆ ರೂಪಾಯಿ ಮೌಲ್ಯ ಡಾಲರ್ ಎದುರು 7 ಪೈಸೆ ಇಳಿಕೆಯಾಗಿ 81.33ಕ್ಕೆ ಕುಸಿದಿತ್ತು. ಇಂದು ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ 81.26 ರಲ್ಲಿ ವಹಿವಾಟು ಆರಂಭಿಸಿತು. ನಂತರ ಅದು 81.25 ಕ್ಕೆ ತಲುಪಿ ಅತ್ಯಲ್ಪ ಚೇತರಿಕೆ ಕಂಡಿತು. ಆರಂಭಿಕ ವಹಿವಾಟು ಮುಕ್ತಾಯಕ್ಕೂ ಮೊದಲು ರೂಪಾಯಿ 8 ಪೈಸೆಯಷ್ಟು ಏರಿಕೆಯನ್ನು ದಾಖಲಿಸಿತು.ಈ ಮಧ್ಯೆ ವಿವಿಧ ರಾಷ್ಟ್ರಗಳ ಆರು ಕರೆನ್ಸಿಗಳ ಮುಂದೆ ಡಾಲರ್ ಶೇಕಡಾ 0.37 ರಷ್ಟು ಕುಸಿದು 104.15 ಕ್ಕೆ ತಲುಪಿದೆ. ವಿದೇಶಿ ವಿನಿಮಯ ವ್ಯಾಪಾರಿಗಳು ದೇಶೀಯ ಷೇರುಗಳ ಮೇಲೆ ಹೂಡಿಕೆ ಹೆಚ್ಚಿಸಿದ ಕಾರಣ ರೂಪಾಯಿ ತುಸು ಏರಿಕೆ ಕಂಡಿದೆ.
ಕಚ್ಚಾ ತೈಲ ದರ ಏರಿಕೆ: ರೂಪಾಯಿ ದರ ಇಳಿಕೆ ಕಂಡ ಬೆನ್ನಲ್ಲೇ, ಜಾಗತಿಕ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಶೇಕಡಾ 1.05 ರಷ್ಟು ಏರಿಕೆ ಕಂಡು 86.47 ರಷ್ಟಿದೆ.ಸೆನ್ಸೆಕ್ಸ್ ಪಾಯಿಂಟ್ಸ್ ಕುಸಿತ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 139.99 ಪಾಯಿಂಟ್ ಕುಸಿತ ಕಂಡು 62,728.51 ಕ್ಕೆ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿ 22.60 ಪಾಯಿಂಟ್ ಇಳಿದು 18,673.50 ಕ್ಕೆ ತಲುಪಿದೆ.