ಭಾರತ ದೇಶದ ಅತ್ಯಂತ ಶ್ರೀಮಂತ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ತಮ್ಮ ಐಶಾರಾಮಿ ಜೀವನ ಶೈಲಿಯಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ನೀತಾ ಅಂಬಾನಿ ಅವರಿಗೆ ಅತಿ ದುಬಾರಿ ಹಾಗೂ ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಇದೀಗ ನೀತಾ ಅಂಬಾನಿ ಪಾರ್ಟಿಯೋದರಲ್ಲಿ ಧರಿಸಿದ್ದ ವಾಚ್ ನ ಬೆಲೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ನೀತಾ ಅಂಬಾನಿ ಅವರು ಅತಿ ದುಬಾರಿ ಬೆಲೆಯ ಬಟ್ಟೆಗಳು, ಬ್ಯಾಗ್, ಸ್ಲಿಪ್ಪರ್ ಸೇರಿದಂತೆ ಇನ್ನಿತರ ವಸ್ತುಗಳ ಸಂಗ್ರಹವನ್ನು ಹೊಂದಿದ್ದಾರೆ. ಇದೀಗ ಅವರ ವಾಚ್ ಬೆಲೆ ಕೇಳಿ ಎಲ್ಲರೂ ದಂಗಾಗಿದ್ದಾರೆ.
ನೀತಾ ಅಂಬಾನಿ ಧರಿಸಿದ್ದ ವಿಶಿಷ್ಟವಾದ ವಾಚ್ ನ ಬೆಲೆ ಬರೋಬ್ಬರಿ 3 ಕೋಟಿ ರೂ. ಇತ್ತೀಚೆಗೆ ನೀತಾ ಅಂಬಾನಿಯವರು ತಮ್ಮ ಮಗಳು ಇಶಾ ಅಂಬಾನಿ ಅವರ ಮಕ್ಕಳ ಹುಟ್ಟು ಹಬ್ಬದಲ್ಲಿ ಜಾಕೋಬ್ ಅಂಡ್ ಕೋ ಆಸ್ಟ್ರೋನೋಮಿಯಾ ಫ್ಲೂರ್ಸ್ ಡಿ ಜಾರ್ಡಿನ್ ವಾಚ್ ಅನ್ನು ಧರಿಸಿದ್ದಾರೆ.
ನೀತಾ ಅಂಬಾನಿಯವರು ಧರಿಸಿದ್ದ ವಾಚ್ ನ ವಿನ್ಯಾಸ ಅತ್ಯಾಕರ್ಷಣೀಯವಾಗಿದೆ. ಇದು 18k ಚಿನ್ನದ ಕೇಸ್ ಹೊಂದಿದೆ. ಹಸಿರು, ನೀಲಿ, ಕೆಂಪು, ಹಳದಿ, ಗುಲಾಬಿ ಬಣ್ಣಗಳನ್ನೊಳಗೊಂಡಿರುವ ಈ ವಾಚ್ ರೋಮನ್ ಅಂಕಿಗಳಲ್ಲಿ ಸಮಯವನ್ನು ಪ್ರದರ್ಶಿಸುತ್ತದೆ.
ವಾಚ್ ನ ಸುತ್ತಲು ಎರಡು ರಿಂಗ್ ಗಳ ವಿನ್ಯಾಸವಿದೆ. ಒಳಗೆ ಚಿಟ್ಟೆಯಾಕಾರದ ಹಾಗೂ ನಕ್ಷತ್ರಾಕಾರದ ವಿನ್ಯಾಸವಿದೆ.
ಸೂಕ್ಷ್ಮವಾದ ಚಿಟ್ಟೆಯಾಕಾರದ ಹಾರುವ ಟೂರ್ ಬಿಲ್ಲನ್, ಸಮಯ ಪ್ರದರ್ಶನ ಹಾಗೂ ಮೇಲಿನ ಹಂತದಲ್ಲಿರುವ ಗುಲಾಬಿ ನೀಲಮಣಿ ಹಾಗೂ ಹೂವುಗಳು ಹತ್ತು ನಿಮಿಷಗಳಲ್ಲಿ ಡಯಲ್ ಸುತ್ತಲೂ ಪ್ರದಕಷಿಣಾಕಾರದಲ್ಲಿ ತಿರುಗುತ್ತವೆ. ಆದರೆ ಗುಲಾಬಿ ನೀಲಮಣಿಗಳೊಂದಿಗೆ ಹೊಂದಿಸಲಾಗಿರುವ ಮದರ್ ಆಫ್ ಪರ್ಲ್ ಬೇಸ್ ಅದೇ ವೇಗದಲ್ಲಿ ಅಪ್ರದಕ್ಷಿಣಾಕಾರವಾಗಿ ತಿರುಗುತ್ತದೆ.
ಇತ್ತೀಚೆಗೆ ಮುಖೇಶ್ ಅಂಬಾನಿಯವರು ತಮ್ಮ ಪತ್ನಿ ನೀತಾ ಅಂಬಾನಿ ಅವರಿಗೆ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಾರ್ ಅನ್ನು ಉಡುಗೊರೆಯನ್ನಾಗಿ ನೀಡಿದ್ದರು.
ಕಪ್ಪು ಬಣ್ಣದ ಬ್ಯಾಡ್ಜ್ ಆವೃತ್ತಿಯನ್ನೋಳಗೊಂಡ ಐಶಾರಾಮಿ ಕಾರು ಇದಾಗಿದೆ. ಈ ಕಾರಿನ ಆನ್ ರೋಡ್ ಬೆಲೆ ಸುಮಾರು 10 ಕೋಟಿ ರೂ. ಆಗುತ್ತದೆ. ಇದು ಭಾರತದ ಅತ್ಯಂದ ದುಬಾರಿ ಕಾರು ಹಾಗೂ ದುಬಾರಿ ಉಡುಗೊರೆಯಾಗಿದೆ.





