Mysore
27
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ನೆಸ್ಲೆ ಇಂಡಿಯಾಗೆ ಅತ್ಯುತ್ತಮ ಉದ್ಯಮ ಪ್ರಶಸ್ತಿ

ಮೈಸೂರು : IIMR – ICAR‌ ನ ನ್ಯೂಟ್ರಿಹಬ್‌ ಆಯೋಜಿಸಿದ್ದ ನ್ಯೂಟ್ರಿ ಕನ್ವೆನ್ಸನ್‌ ನಲ್ಲಿ ಆಹಾರ ಉತ್ಪನ್ನಗಳ ತಯಾರಿಕಾ ಕಂಪನಿಯಾದ ನೆಸ್ಲೆ ಇಂಡಿಯಾ ಅತ್ಯುತ್ತಮ ಉದ್ಯಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಮೈಸೂರಿನಲ್ಲಿ IIMR – ICAR ನ ನ್ಯೂಟ್ರಿ ಹಬ್ ಆಯೋಜನೆ ಮಾಡಿದ್ದ ಅಂತರಾಷ್ಟ್ರೀಯ ನ್ಯೂಟ್ರಿ ಸೀರಿಯಲ್‌ ಕನ್ವೆನ್ಸನ್‌ 5.0 ರಲ್ಲಿ ನೆಸ್ಲೆ ಇಂಡಿಯಾ ಕಂಪನಿಯು ಅತ್ಯುತ್ತಮ ಉದ್ಯಮ ಪ್ರಾಡಕ್ಟ್‌ ಇನ್ನೋವೇಶನ್‌ ಫಾರ್‌ ಮೇನ್‌ ಸ್ಟರೀಮಿಂಗ್‌ ಮಿಲ್ಲೆಟ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಇನ್ನು ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ನೆಸ್ಲೆ ಇಂಡಿಯಾ ಕಂಪನಿಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್‌ ನಾರಾಯಣ್‌ ಅವರು ಅತ್ಯುತ್ತಮ ಉದ್ಯಮ ಪ್ರಾಡಕ್ಟ್‌ ಇನ್ನೋವೇಶನ್‌ ಫಾರ್‌ ಮೇನ್‌ ಸ್ಟರೀಮಿಂಗ್‌ ಮಿಲ್ಲೆಟ್ಸ್‌ ಅವಾರ್ಡ್‌ ಪಡೆಯುತ್ತಿರುವುದಕ್ಕೆ ನೆಸ್ಲೆ ಇಂಡಿಯಾಗೆ ಹೆಮ್ಮೆ ಅನ್ನಿಸುತ್ತಿದೆ. ನೆಸ್ಲೆ ಇಂಡಿಯಾಗೆ ಈ ಪ್ರಶಸ್ತಿ ಲಭಿಸಿರುವುದು ಆಹಾರ ಉದ್ಯಮದಲ್ಲಿನ ಉತ್ಕೃಷ್ಟತೆ ಹಾಗೂ ನಾವೀನ್ಯತೆಗೆ ಸಂಸ್ಥೆ ಹೊಂದಿರುವ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಹಲವು ಕಂಪನಿಗಳ ಉತ್ಪಾದಕರು, ನೀತಿ ನಿರೂಪಕರು, ಉತ್ಪನ್ನಗಳ ಸಂಸ್ಕರಣಾಕಾರರು, ಶಿಕ್ಷಣ ತಜ್ಞರು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಇನ್ಕ್ಯೂಬೇಟರ್‌ ಗಳು, ಸ್ಟಾರ್ಟಪ್‌ ಗಳು, ಮೈಕ್ರೋ ಉದ್ಯಮಿಗಳು, ಮಿಲೆಟ್ಸ್‌ ಪರಿಸರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಎನ್‌ಜಿಒಗಳು ಸೇರಿದಂತೆ ಹಲವಾರು ಕ್ಷೇತ್ರಗಳ ಪರಿಣಿತರು ಭಾಗಿಯಾಗಿದ್ದರು.

ನೆಸ್ಲೆ ಇಂಡಿಯಾ ಕಂಪನಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಉತ್ಪನ್ನಗಳ ರುಚಿಯ ಜೊತೆಗೆ ಬದಲಾಗುತ್ತಿರುವ ಜೀವನ ಶೈಲಿಗೆ ತಕ್ಕಂತೆ ಗ್ರಾಹಕರ ಅಗತ್ಯತೆಗಳನ್ನು ಸಮರ್ಪಕವಾಗಿ ಪೂರೈಸುತ್ತಾ ಬಂದಿದೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ನೀಡುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!