Mysore
20
overcast clouds
Light
Dark

ಅಮೆಜಾನ್ ನಿಂದ ನೂರಾರು ಮಂದಿಯ ಉದ್ಯೋಗಕ್ಕೆ ಕತ್ತರಿ

ಪ್ರಸಿದ್ಧ ಅಮೆಜಾನ್ ಕಂಪನಿ ತನ್ನ ಅಲೆಕ್ಸಾ ಘಟಕದಿಂದ ನೂರಾರು ಮಂದಿ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕಿದೆ.

Amazon.com ತನ್ನ ಅಲೆಕ್ಸಾ ವಾಯ್ಸ್ ಘಟಕದ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಘೋಷಿಸಿದೆ.

ಇದರ ಪ್ರಕಾರ ನೂರಾರು ಮಂದಿ ಉದ್ಯೋಗಿಗಳ ಜೀವನದ ಮೇಲೆ ಇದು ಪರಿಣಾಮ ಬೀರಲಿದೆ. ಹೀಗೆ ಧಿಡೀರನೆ ಕೆಲಸದಿಂದ ವಜಾಗೊಳಿಸುವುದರಿಂದ ಉದ್ಯೋಗಿಗಳು ಹಾಗೂ ಅವರ ಕುಟುಂಬಸ್ಥರು ಸಂಕಷ್ಟಕ್ಕೀಡಾಗಲಿದ್ದಾರೆ. ಎಂಬುದನ್ನು ಸ್ಪಷ್ಟೀಕರಿಸಲು ಕಂಪನಿಯ ವಕ್ತಾರರು ನಿರಾಕರಿಸಿದ್ದಾರೆ.

ವ್ಯಾಪಾರ ಹಾಗೂ ಆದ್ಯತೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಲುವಾಗಿ ನಾವು ನಮ್ಮ ಕೆಲವು ಪ್ರಯತ್ನಗಳನ್ನು ಬದಲಾಯಿಸುತ್ತಿದ್ದೇವೆ. ಇದು ಗ್ರಾಹಕರಿಗೆ ಅತಿ ಮುಖ್ಯವಾಗಿದೆ. ಸಂಪನ್ಮೂಲಗಳನ್ನು ಹೆಚ್ಚಿಸುವುದು ಮತ್ತು ಉತ್ಪಾದಕ ಎಐ ಮೇಲೆ ಕೇಂದ್ರೀಕರಿಸಿದ ಪ್ರಯತ್ನಗಳನ್ನು ಕೂಡ ಇದರಲ್ಲಿ ಒಳಗೊಳ್ಳುತ್ತದೆ ಎಂದು ಕಂಪನಿಯ ಉಪಾಧ್ಯಕ್ಷ ಡೇನಿಯಲ್ ರೌಶ್ ತಿಳಿಸಿದ್ದಾರೆ.

ಅಮೆಜಾನ್ ಕಂಪನಿ ತನ್ನ ಮ್ಯೂಸಿಕ್ ಹಾಗೂ ಗೇಮಿಂಗ್ ಮತ್ತು ಕೆಲವು ಸಂಪನ್ಮೂಲ ವಿಭಾಗಗಳನ್ನು ಒಳಗೊಂಡಂತೆ, ಕಳೆದ ಕೆಲ ದಿನಗಳ ಹಿಂದೆ ಹಲವು ವಿಭಾಗಗಳನ್ನು ಹಿಂದಕ್ಕೆ ಪಡೆದಿತ್ತು. ಇದರ ಪರಿಣಾಮವಾಗಿ ಆಯಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಉದ್ಯೋಗಕ್ಕೂ ಕುತ್ತು ತಂದಿತ್ತು.

ಹಲವು ಕಂಪನಿಗಳು ಸಂಪನ್ಮೂಲಗಳ ಉತ್ಪಾದನೆಯನ್ನು ಎಐ ಗೆ ವರ್ಗಾಯಿಸುತ್ತಿವೆ. ಈ ಎಐ ಸಾಫ್ಟ್ ಕೋಡ್ ರಚಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಸಣ್ಣ ಪ್ರಾಂಪ್ಟ್ ಗಳನ್ನು ನೀಡಿದರೆ ದೀರ್ಘವಾದ ಪಠ್ಯ ಪ್ರತಿಕ್ರಿಯೆಯನ್ನು ನೀಡುತ್ತದೆ.

ಅಲೆಕ್ಸಾ ಎಂಬುದು ಅಮೆಜಾನ್ ಕಂಪನಿಯ ಒಂದು ಸಂಗೀತ ಸಾಧನ. ಈ ಅಲೆಕ್ಸಾ ವನ್ನು ಸಂಗೀತ ಕೇಳಲು, ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಅಲಾರಾಂ ಹೊಂದಿಸಲು ಇನ್ನು ಮುಂತಾದವುಗಳಿಗೆ ಬಳಸಬಹುದಾಗಿದೆ. ಅಮೆಜಾನ್ ಕಂಪನಿ ವಿಶ್ವದಾದ್ಯಂತ ಪ್ರಖ್ಯಾತಿ ಪಡೆದಿರುವ ಸಾಫ್ಟ್ವೇರ್ ಕಂಪನಿಯಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ