Mysore
15
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಇಂದಿನಿಂದ ಅಜಿಯೋ ಬಿಗ್‌ ಬೋಲ್ಡ್ ಸೇಲ್‌ ಆರಂಭ

ಮುಂಬೈ : ಇಂಡಿಯಾದ ಪ್ರೀಮಿಯಂ ಇ-ಟೇಲರ್‌ ಅಜಿಯೋ ಇಂದಿನಿಂದ ತನ್ನ ಬಿಗ್‌ ಬೋಲ್ಡ್ ಸೇಲ್‌ ಆರಂಭ ಮಾಡಿದೆ.

ಈ ಬಿಗ್‌ ಬೋಲ್ಡ್ ಸೇಲ್‌ ಗೆ ಪ್ರಸಿದ್ಧ ಅಡಿಡಾಸ್‌ ಕಂಪನಿಯ ಪ್ರಾಯೋಜಕತ್ವ ಹಾಗೂ ಸೂಪರ್‌ ಡ್ರೀ ಸಹಪ್ರಾಯೋಜಕತ್ವ ಇದೆ. ಅಜಿಯೋದಲ್ಲಿ ಡಿಸೆಂಬರ್‌ 4 ರಿಂದಲೇ ಮಾರಾಟಕ್ಕೆ ಆರಂಭಿಕ ಪ್ರವೇಶ ದೊರೆತಿದೆ. ಇದುವರೆಗಿನ ಬಿಗ್‌ ಬೋಲ್ಟ್‌ ಸೇಲ್‌ ಗಳ ಪೈಕಿ ಇದು ಅತಿ ದೊಡ್ಡ ಬಿಗ್‌ ಬೋಲ್ಡ್ ಸೇಲ್‌ ಆವೃತ್ತಿಯಾಗಿದೆ.

ಈ ಬಿಗ್‌ ಬೋಲ್ಡ್ ಸೇಲ್‌ ನಲ್ಲಿ ಗ್ರಾಹಕರು 5500 ಕ್ಕೂ ಹೆಚ್ಚಿನ ಬ್ರಾಂಡ್‌ ಗಳಲ್ಲಿ 1.6 ಮಿಲಿಯನ್‌ ಕ್ಯರೇಟೆಡ್‌ ಫ್ಯಾಷನ್‌ ಸ್ಟೈಲ್‌ ಗಳಲ್ಲಿ ತಮಗೆ ಬೇಕಾದುದ್ದನ್ನು ಖರೀದಿ ಮಾಡಬಹುದಾಗಿದೆ.

ಈ ಮಹಾ ಸೇಲ್‌ ನಲ್ಲಿ ಗ್ರಾಹಕರು ಭಾರತ ದೇಶದಾದ್ಯಂತ 19000 ಕ್ಕೂ ಹೆಚ್ಚಿನ ಪಿನ್‌ ಕೋಡ್‌ ಗಳಿಂದ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಅಂತರಾಷ್ಟ್ರೀಯ ಬ್ರಾಂಡ್‌ ಗಳು, ಸ್ವಂತ ಲೇಬಲ್‌ ಗಳು ಹಾಗೂ ದೇಶೀಯ ಬ್ರಾಂಡ್‌ ಗಳನ್ನು ಒಳಗೊಂಡಿದೆ. ಇದರಲ್ಲಿ ಲೈಫ್‌ ಸ್ಟೈಲ್‌, ಅಲಂಕಾರಿಕ ವಸ್ತುಗಳು ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವಾರು ಬಗೆಯ ವಸ್ತುಗಳು ಹಾಗೂ ಸುಪ್ರಸಿದ್ಧ ಬ್ರಾಂಡ್‌ ಗಳು ಲಭ್ಯವಿದೆ.

ಇನ್ನು ಕೆಲವು ಬ್ರಾಂಡ್‌ ಗಳ ಮೇಲೆ 50% ರಿಂದ 90% ವರೆಗೆ ರಿಯಾಯಿತಿ ಇದೆ. ಐಸಿಐಸಿ ಬ್ಯಾಂಕ್‌ ನ ಕ್ರೆಡಿಟ್‌ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಉಪಯೋಗಿಸಿ ಶಾಪಿಂಗ್‌ ಮಾಡಿದರೆ ಹಲವು ಬ್ರಾಂಚ್‌ ಗಳಲ್ಲಿ 10% ವರೆಗೆ ರಿಯಾಯಿತಿ ದೊರೆಯಲಿದೆ.

ಸೂಪರ್‌ ಡ್ರೀ, ಅಡಿಡಾಸ್‌, ನೈಕಿ, ಗ್ಯಾಪ್‌, ಪೂಮಾ, ನ್ಯೂ ಬ್ಯಾಲೆನ್ಸ್‌, ಸ್ಟೀವ್‌ ಮ್ಯಾಡನ್‌, ಟಾಮ್‌ ಹಿಲ್‌ ಫಿಗರ್‌ ಕ್ಯಾಸಿಯೋ, ಲ್ಯಾಕ್ಮೆ, ಮೆಬಿಲಿನ್‌ ಸೇರಿದಂತೆ ಇನ್ನೂ ಅನೇಕ ಬ್ರಾಂಡ್‌ ಗಳ ಮೇಲೆ ಅತ್ಯಾಕರ್ಷಕ ಡೀಲ್‌ ಲಭ್ಯವಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!