Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಏಷ್ಯಾದ ಮೊದಲ ಜಲ ವಿದ್ಯುತ್‌ ಉತ್ಪಾದನಾ ಕೇಂದ್ರ ಶಿವನ ಸಮುದ್ರ

ಶಿವನ ಸಮುದ್ರ ಮೈಸೂರಿನ ಸಮೀಪದಲ್ಲಿರುವ ಒಂದು ಪ್ರಮುಖ ಪ್ರವಾಸಿ ತಾಣ. 1902ರಲ್ಲಿ ಶಿವನ ಸಮುದ್ರದ ಬಳಿಕ ಜಲವಿದ್ಯುತ್‌ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಇದು ಏಷ್ಯಾದಲ್ಲೇ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ.

ಈ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಶಿಂಷಾ ಜಲವಿದ್ಯುದಾಗಾರದ ಸಮೀಪವಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರೂ ಎರಡೂ ಕಡೆ ನೀರು ಎತ್ತರದಿಂದ ಹಾಗೂ ರಭಸವಾಗಿ ಧುಮುಕುತ್ತದೆ.

ಈ ಕಾವೇರಿ ನದಿ ತೀರದಲ್ಲಿಯೇ ಪ್ರಾಚೀನಕಾಲದ ಸೋಮೇಶ್ವರ ದೇವಾಲಯವಿದೆ. ಇದರ ಸಮೀಪ ಶಕ್ತಿ ದೇವತೆಯಾದ ಶಿವನ ಸಮುದ್ರ ಮಾರಮ್ಮನ ದೇವಾಲಯವೂ ಇದೆ. ಹರಕೆ ಹೊತ್ತು ಬರುವ ಭಕ್ತಾದಿಗಳು ಇಲ್ಲಿ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ.

ಸಮೀಪದಲ್ಲೇ ವೈಷ್ಣವ ದೇವಾಲಯವಾದ ವೆಂಕಟರಮಣ ಸ್ವಾಮಿ ದೇವಸ್ಥಾನವಿದೆ. ಶಯನ ಭಂಗಿಯಲ್ಲಿರುವ ವಿಷ್ಣುವಿನ ಮೂರ್ತಿಯನ್ನು ಇಲ್ಲಿ ಕಾಣಸಿಗಲಿದ್ದು, ಮಧ್ಯರಂಗ ಎಂಬ ಹೆಸರಿನಲ್ಲಿ ಈ ದೇವಾಲಯ ಪ್ರಸಿದ್ಧ ಪಡೆದಿದೆ.

ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ತಂಗಂನ ಅಂತ್ಯರಂಗವನ್ನು ಸೂರ್ಯೋದಯದಿಂದ ಸೂರ್ಯಾಸ್ತದೊಳಗೆ ದರ್ಶನ ಡಿದರೆ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಇದೆ. ಪ್ರತಿ ವರ್ಷ ಇಲ್ಲಿ ಜಾತ್ರೆ ಯುತ್ತಿದ್ದು, ಅದ್ದೂರಿಯಾಗಿ ರಥೋತ್ಸವ ನಡೆಸಲಾಗುತ್ತದೆ. ಇಲ್ಲಿನ ಸೋಮೇಶ್ವರ ವಸ್ಥಾನದಲ್ಲಿ ಶ್ರೀಚಕ್ರವಿದೆ.

ಕೋಲಾರದ ಚಿನ್ನದ ಗಣಿ, ಭದ್ರಾವತಿ ಕಬ್ಬಿಣದ ಕಾರ್ಖಾನೆಗೆ ವಿದ್ಯುತ್‌ ಒದಗಿಸುವ ವಾಗಿ ಶಿಂಷಾ ಹೈಡೋ ಎಲೆಕ್ನಿಕ್ ಪವರ್ ಸ್ಟೇಷನ್ ದಿವಾನ್ ಶೇಷಾದ್ರಿ ಅಯ್ಯರ್ ರ ಕಾಲದಲ್ಲಿ ಆಗಸ್ಟ್ 6, 1904ರಲ್ಲಿ ಆರಂಭಿಸಲಾಯಿತು. ಶಿವನಸಮುದ್ರದಲ್ಲಿ ದಲ್ಲೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯಾದದ್ದು ಮತ್ತು ಈ ಕುರಿತ ಜನೆ ಶೇಷಾದ್ರಿ ಅಯ್ಯರ್ ಅವರ ದಿವಾನಗಿರಿಯಲ್ಲಿ 1900ರ ವರ್ಷದಲ್ಲಿ ರ್ಯರೂಪಕ್ಕೆ ಬಂದದ್ದೂ ಚರಿತ್ರೆಯಲ್ಲಿ ಸ್ಪಷ್ಟವಾಗಿದೆ. ಇಲ್ಲಿ ವಿದ್ಯುತ್ ಉತ್ಪಾದನೆ ಗುತ್ತಿರುವುದನ್ನು ಬ್ರಿಟಿಷರು ನಂಬಲಿಲ್ಲ. ಶಿಂಷಾ ಪವರ್ ಸ್ಟೇಷನ್ನಿನಿಂದ ವಿದ್ಯುತ್ತು ನೇರವಾಗಿ ನಕಪುರದ ಕಾನಕಾನಹಳ್ಳಿ ಎಲೆಕ್ನಿಕ್‌ ಗ್ರಿಡ್‌ಗೆ ಸರಬರಾಜು ಮಾಡಿ ನಂತರ ಬೆಂಗಳೂರು ನಗರಕ್ಕೆ ವಿದ್ಯುತ್ ಸರಬರಾಜು ಮಾಡಲಾಯಿತು. ಆನಂದರಾವ್ ಸರ್ಕಲ್ಲಿನಲ್ಲಿ ವಿದ್ಯುತ್ತಿನ ಮುಖ್ಯ ಕಚೇರಿ ಇತ್ತು. ಪ್ರತಿದಿನ ರಾತ್ರಿ 9ಕ್ಕೆ ಸರಿಯಾಗಿ ಒಂದು ಸೆಕೆಂಡ್ ಕಾಲಇಡೀ ಬೆಂಗಳೂರನ್ನು ಕತ್ತಲು ಮಾಡುತ್ತಿದ್ದರು.

ಶಿವನ ಸಮುದ್ರದಿಂದ 1902ರ ವರ್ಷದಲ್ಲೇ ಕೋಲಾರ ಚಿನ್ನದ ಗಣಿಗೆ, 19050 ವರ್ಷದಲ್ಲಿ ಬೆಂಗಳೂರು ನಗರಕ್ಕೆ ಮತ್ತು 1906ರಲ್ಲಿ ಮೈಸೂರು ನಗರಕ್ಕೆ ವಿದ್ಯುತ್ ಹರಿದು ಬಂದದ್ದು ವಿಶೇಷವಾದುದಾಗಿದೆ. ಈ ಭಾಗದಲ್ಲಿ ಗಣಿಗಾರಿಕೆಯಿಂದ ಪ್ರಾಕೃತಿಕ ಸೌಂದರ್ಯಕ್ಕೆ ಅಪಾಯ ಒದಗುತ್ತಿದ್ದ ಸಂದರ್ಭದಲ್ಲಿ 2006ರಲ್ಲಿ ಹೈಕೋರ್ಟ್‌ ನ್ಯಾಯಪೀಠ ಅಂತಹ ಚಟುವಟಿಕೆಗಳಿಗೆ ತಡೆ ಹಾಕಿದ್ದುದು ಸ್ತುತ್ಯಾರ್ಹವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ