Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಕರ್ನಾಟಕದ ಕಸ್ತೂರಬಾ ಶ್ರೀಮತಿ ಯಶೋಧರ ದಾಸಪ್ಪ

ದಲಿತ ಮತ್ತು ಮಹಿಳಾ ಪರವಾದ ಧ್ವನಿಯಾಗಿದ್ದ ಯಶೋಧರಮ್ಮ ದಾಸಪ್ಪ ಅವರ 116ನೇ ಜನ್ಮ ಜಯಂತಿ ಸಂದರ್ಭ

 ಗಾಂಧಿ ತತ್ವಕ್ಕೆ ಮಾರು ಹೋಗಿದ್ದ ಯಶೋದರ ದಾಸಪ್ಪ ದಂಪತಿಗಳು ಸ್ವಾತಂತ್ರ್ಯ ಹಾಗೂ ಸೇವೆಯ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದರು.ಇವರ ಸಮಾಜ ಸೇವಾ ಕೆಲಸಕ್ಕೆ ರಾಜದ್ರೋಹದ ಪಟ್ಟ ಕಟ್ಟಿದ್ದರು.

ಸತೀಶ್‌ ಗೌಡ ಬೀಡನಹಳ್ಳಿ ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್‌

ದೊಡ್ಡ ಬಳ್ಳಾಪುರ ತಾಲ್ಲೂಕಿನ ಕಲ್ಲುದೇವರಹಳ್ಳಿಯಲ್ಲಿ ಚಿಕ್ಕಣ್ಣೇಗೌಡರ ವಂಶದ ಮೇರು ಕಿರೀಟ ಎಂಬ ಖ್ಯಾತಿ ಪಡೆದ ಕೆ.ಹೆಚ್.ರಾಮಯ್ಯ ಹಾಗೂ ರೇವಮ್ಮ ದಂಪತಿಗೆ ೧೯೦೫ ರ ಮೇ ೨೮ ರಂದು ಮೊದಲ ಮಗುವಾಗಿ ಒಂದು ಹೆಣ್ಣು ಮಗು ಜನನವಾಗುತ್ತದೆ. ಆ ಮಗುವಿಗೆ ಸಾರ್ವಕಾಲಿಕ ಆದರ್ಶ ಮಹಿಳೆ ಭಗವಾನ್ ಬುದ್ಧರ ಆದರ್ಶ ಪತ್ನಿ ಯಶೋಧರೆಯ ನೆನಪಿಗೆ ಯಶೋಧರಾ ಎಂದು ನಾಮಕರಣ ಮಾಡುತ್ತಾರೆ. ಅವರೇ ಕರ್ನಾಟಕದ ಪ್ರಥಮ ಮಹಿಳಾ ಸಚಿವರು ಸ್ವಾತಂತ್ರ ಹೋರಾಟಗಾರರು ಆದ ಯಶೋಧರ ದಾಸಪ್ಪನವರು.

ಹೆಚ್. ಸಿ.ದಾಸಪ್ಪ ಹಾಗೂ ರಾಮಯ್ಯನವರ ಪುತ್ರಿ ಯಶೋಧರ ನಡುವೆ ೧೯೨೬ ರಲ್ಲಿ ವಿವಾಹ ಮಹೋತ್ಸವ ನಡೆಯುತ್ತದೆ. ದಾಸಪ್ಪ ದಂಪತಿಗಳು ಸೇವಾಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ದಲಿತ ಸಮುದಾಯದ ಅನಾಥ ಮಗುವೊಂದನ್ನು ಪೋಷಣೆಗೆ ನೀಡಿರುತ್ತಾರೆ. ಅದನ್ನು ಪ್ರಸಾದವೆಂಬಂತೆ ಸ್ವೀಕರಿಸುವ ದಂಪತಿ ಎರಡು ಮಕ್ಕಳ ಜತೆ ಮೂರನೆಯವರಾಗಿ ಕಂಡು ಸಾಕಿ ಮದುವೆ ಮಾಡುತ್ತಾರೆ. ತಮ್ಮ ಆಸ್ತಿಯನ್ನು ಸಹ ಕೊಟ್ಟ ಧೀಮಂತ ವ್ಯಕ್ತಿತ್ವ ದಾಸಪ್ಪ ದಂಪತಿಗಳದು. ೧೯೬೪ ರಲ್ಲಿ ದಾಸಪ್ಪನವರು ಹೃದಯಾಘಾತದಿಂದ ನಿಧನ ಹೊಂದುತ್ತಾರೆ.
ಮಂತ್ರಿಯಾಗಿ ಯಶೋದರ ದಾಸಪ್ಪ.

೧೯೬೨ ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗಂಡಸಿ ವಿಧಾನಸಭಾ ಕ್ಷೇತ್ರದಿಂದ ಮೈಸೂರು ರಾಜ್ಯದ ವಿಧಾನಸಭೆಗೆ ಸರಿ ಸುಮಾರು ೧೧,೪೯೮ ಮತಗಳ ಅಂತರದಿಂದ ಆ್ಂಕೆುಗೊಂಡು ಪ್ರಥಮವಾಗಿ ಪಾದಾರ್ಪಣೆ ಮಾಡುತ್ತಾರೆ. ಯಶೋದರ ದಾಸಪ್ಪ ನವರು ಎಸ್.ನಿಜಲಿಂಗಪ್ಪ ಅವರ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿರುತ್ತಾರೆ. ಅಧಿಕಾರ ಬಂದಾಗ ನಿಜಲಿಂಗಪ್ಪ ಅವರು ಬದಲಾದ ಪರಿ ಕಂಡು ಕೆಂಡಾಮಂಡಲರಾದರು. ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿ ಸ್ವಂತ ಕಾರಿನಲ್ಲಿ ಮಂತ್ರಿ ಮಂಡಲ ಸಭೆಗೆ ಹೋಗಿ ರಾಜೀನಾಮೆ ನೀಡಿದರು.

ನೊಂದು ಬೆಂದವರಿಗಾಗಿ ಸಾಮಾಜಿಕ ಸುಧಾರಣೆಗಾಗಿ ಅರಸೀಕೆರೆಯಲ್ಲಿ ಕಸ್ತೂರಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿರ್ಮಾಣ ಮಾಡಿ ಉಳಿದ ಜೀವಿತಾವಧಿಯನ್ನು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

Tags: