Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಭಾರತ vs ನ್ಯೂಜಿಲೆಂಡ್‌ ಪ್ರಥಮ ಟೆಸ್ಟ್:‌ ಭಾರತದ ಹೀನಾಯ ಪ್ರದರ್ಶನ, ಕಿವೀಸ್‌ಗೆ 134 ರನ್‌ಗಳ ಮುನ್ನಡೆ

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್‌ 134 ರನ್‌ಗಳ ಮುನ್ನಡೆ ಕಾಯ್ದುಕೊಂಡು ಭಾರತದ ವಿರುದ್ಧ ಮೇಲುಗೈ ಸಾಧಿಸಿದೆ.

ಮಳೆ ಕಾರಣದಿಂದಾಗಿ ಒಂದು ದಿನ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಮಾಡಿ ಕೇವಲ 46 ರನ್‌ಗಳಿಗೆ ಆಲ್‌ಔಟ್‌ ಆಗುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿತು. ತವರು ನೆಲದಲ್ಲಿ ಭಾರತ ಟೆಸ್ಟ್‌ ಇನ್ನಿಂಗ್ಸ್‌ವೊಂದರಲ್ಲಿ ಕಲೆಹಾಕಿದ ಕಡಿಮೆ ಮೊತ್ತ ಎಂಬ ಕೆಟ್ಟ ದಾಖಲೆಯನ್ನು ಬರೆಯಿತು. ಟೀಮ್‌ ಇಂಡಿಯಾ ವಿರುದ್ಧ ಬೌಲಿಂಗ್‌ನಲ್ಲಿ ಆಕ್ರಮಣಕಾರಿ ಆಟವನ್ನಾಡಿದ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಆರಂಭಿಸಿದ್ದು ಎರಡನೇ ದಿನದಾಟದಂತ್ಯಕ್ಕೆ 50 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 180 ರನ್‌ ಕಲೆಹಾಕಿದೆ.

ಭಾರತದ ಇನ್ನಿಂಗ್ಸ್:‌ ತಂಡದ ಪರ ರಿಷಬ್‌ ಪಂತ್‌ ಗಳಿಸಿದ 20 ರನ್‌ಗಳೇ ಇನ್ನಿಂಗ್ಸ್‌ನ ವೈಯಕ್ತಿಕ ಗರಿಷ್ಟ ಎನಿಸಿಕೊಂಡಿದೆ. ತಂಡದ ಯಾವುದೇ ಆಟಗಾರ ಸಹ ನ್ಯೂಜಿಲೆಂಡ್‌ ಬೌಲಿಂಗ್‌ ದಾಳಿಗೆ ಪ್ರತ್ಯುತ್ತರ ನೀಡುವಲ್ಲಿ ಯಶಸ್ವಿಯಾಗಲೇ ಇಲ್ಲ. ಯಶಸ್ವಿ ಜೈಸ್ವಾಲ್‌ 13, ನಾಯಕ ರೋಹಿತ್‌ ಶರ್ಮಾ 2, ವಿರಾಟ್ ಕೊಹ್ಲಿ 0, ಸರ್ಫರಾಜ್‌ ಖಾನ್‌ 0, ಪಂತ್‌ 20, ಕೆಎಲ್‌ ರಾಹುಲ್‌ 0, ರವೀಂದ್ರ ಜಡೇಜಾ 0, ರವಿಚಂದ್ರನ್‌ ಅಶ್ವಿನ್‌ 0, ಕುಲ್‌ದೀಪ್‌ ಯಾದವ್‌ 2, ಜಸ್‌ಪ್ರೀತ್‌ ಬುಮ್ರಾ 1 ಮತ್ತು ಮೊಹಮ್ಮದ್‌ ಸಿರಾಜ್‌ ಅಜೇಯ 4 ರನ್‌ ಗಳಿಸಿದರು.

ನ್ಯೂಜಿಲೆಂಡ್‌ ಪರ ಕೇವಲ ಮೂವರು ಮಾತ್ರ ಬೌಲಿಂಗ್‌ ಮಾಡಿದ್ದು ಈ ಪೈಕಿ ಮ್ಯಾಟ್‌ ಹೆನ್ರಿ 5 ವಿಕೆಟ್‌, ವಿಲಿಯಮ್ ಒರೌಕ್‌ 4 ವಿಕೆಟ್‌ ಮತ್ತು ಟಿಮ್‌ ಸೌದಿ 1 ವಿಕೆಟ್‌ ಪಡೆದರು.

ನ್ಯೂಜಿಲೆಂಡ್‌ ಇನ್ನಿಂಗ್ಸ್:‌ ನಾಯಕ ಟಾಮ್‌ ಲಾಥಮ್‌ 15, ಡಿವಾನ್‌ ಕಾನ್ವೆ 91, ವಿಲ್‌ ಯಂಗ್‌ 33, ರಚಿನ್‌ ರವೀಂದ್ರ ಅಜೇಯ 22 ಮತ್ತು ಡೆರಿಲ್‌ ಮಿಚೆಲ್‌ ಅಜೇಯ 14 ರನ್‌ ಗಳಿಸಿದರು.

ಭಾರತದ ಪರ ರವಿಚಂದ್ರನ್‌ ಅಶ್ವಿನ್‌, ಕುಲ್‌ದೀಪ್‌ ಯಾದವ್‌ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್‌ ಪಡೆದರು.

Tags: