Mysore
19
broken clouds

Social Media

ಭಾನುವಾರ, 01 ಫೆಬ್ರವರಿ 2026
Light
Dark

ಕೋವಿಡೋತ್ತರದಲ್ಲಿ ಮಕ್ಕಳ ಆತಂಕಗಳು: ಮಕ್ಕಳ ಸಮಸ್ಯೆ ನಿವಾರಣೆಗೆ ಆದ್ಯತೆ ಅಗತ್ಯ

– ಡಾ.ಎನ್.ವಿ.ವಾಸುದೇವ ಶರ್ವಾ

ಜಗತ್ತಿನ ಈ ದಶಕದಾರಂಭ ಆತಂಕಗಳೊಂದಿಗಾಯಿತು. ಕೋವಿಡ್‌ನಿಂದಾದ ಸಾವು ನೋವುಗಳು, ಹವಾವಾನ ವೈಪರೀತ್ಯಗಳು, ಆರ್ಥಿಕ ಕುಸಿತ, ಹಣದುಬ್ಬರ. ಜೊತೆಗೆ ರಷ್ಯಾ ಆರಂಭಿಸಿದ ಯುದ್ಧ, ಇಸ್ರೇಲ್-ಪ್ಯಾಲೆಸ್ಟೀನ್‌ ಸಂಘರ್ಷ, ಅಮೆರಿಕದಲ್ಲಿನ ಆರ್ಥಿಕ ಹಿಂಜರಿಕೆ ಈ ಎಲ್ಲವೂ ಎಲ್ಲರ ಮೇಲೂ, ಅದರಲ್ಲೂ ಮಕ್ಕಳ ಮೇಲೆ ಪ್ರಭಾವ ಬೀರಲಾರಂಭಿಸಿದೆ.

ಭಾರತದಲ್ಲಿಯೂ ಬದಲಾಗುತ್ತಿರುವ ಕಾಲವಾನ, ಪರಿಸ್ಥಿತಿಗಳ ಹಿನ್ನೆಲೆುಂಲ್ಲಿ, ಮಕ್ಕಳ ಹಕ್ಕುಗಳ ದೃಷ್ಟಿಕೋನದಿಂದ ಕೆಲವು ವಿಚಾರಗಳ ಕುರಿತು ವಿಶೇಷವಾಗಿ ಗಮನಹರಿಸಬೇಕಿದೆ. ಕೊರೊನಾ-19 ಸಾಂಕ್ರಾಮಿಕದ ಪಿಡುಗು ಕಡಿಮೆಯಾಗಿದ್ದರೂ ಅದರ ಪರಿಣಾಮಗಳು ಇನ್ನೂ ಇವೆ ಮತ್ತು ಅವುಗಳಿಂದ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಿದೆ.

ವಿವಿಧ ಹಂತದ ಸರ್ಕಾರಗಳಲ್ಲಿ ಯೋಜನೆ, ಶಾಸನ ನಿರ್ಮಿಸುವವರು ಮತ್ತು ಆಡಳಿತದಲ್ಲಿರುವವರಿಗೆ ಇದು ದೊಡ್ಡ ಜವಾಬ್ದಾರಿ. ಎಂತಹ ಸಂದರ್ಭಗಳಲ್ಲಿಯೂ ಎದೆಗುಂದದೆ ನಮ್ಮ ಮಕ್ಕಳ ಪೌಷ್ಟಿಕತೆ, ಆರೋಗ್ಯ, ಶಿಕ್ಷಣ, ಕೌಶಲ ಹೆಚ್ಚಿಸುವ ದಿಶೆಯಲ್ಲಿ, ಹಾಗೆಯೇ ಯಾವ ಮಗುವೂ ಶೋಷಣೆಗೆ ಜಾರದಂತೆ, ಬೀಳದಂತೆ, ಸಾವಿಗೀಡಾಗದಂತೆ, ಅಂಗವಿಕಲವಾಗದಂತೆ, ವಾನಸಿಕ ಖಿನ್ನತೆಗೆ, ಸಮಸ್ಯೆಗಳಿಗೆ ಈಡಾಗದಂತೆ ಕಾಪಾಡುವುದು, ಪರಿಸರವನ್ನು ರಕ್ಷಿಸುವುದು, ಹವಾವಾನದಲ್ಲಾಗುವ ಏರುಪೇರುಗಳನ್ನು ಎದುರಿಸಲು ಕಲಿಯುವುದನ್ನು ಮಾಡಲೇಬೇಕಿದೆ. ಅದನ್ನೇ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು 2016-30 ಸ್ಪಷ್ಟವಾಗಿ ಹೇಳುತ್ತಿರುವುದು.

ಭಾರತದಲ್ಲಿ ಈಗಿರುವಂತೆ ಜನಸಂಖ್ಯೆ ಯಾವುದೇ ನಿುಂಂತ್ರಣವಿಲ್ಲದೆ ಹೀಗೇ ಬೆಳೆಯುತ್ತಲೇ ಹೋಗುತ್ತದೆ ಎಂದೇನೂ ನಾವು ಭಾವಿಸಬೇಕಿಲ್ಲ. ಈಗಾಗಲೇ ಭಾರತದ ಜನನ ಪ್ರಮಾಣ/ಫಲವತ್ತತೆ ಪ್ರಮಾಣ 2019-22ರಲ್ಲಿ 2.0ಕ್ಕೆ ಇಳಿದಿದೆ (ಈ ಪ್ರವಾಣ 2.1 ಇದ್ದರೆ ಆರೋಗ್ಯಕರ ಎನ್ನುವ ಲೆಕ್ಕಾಚಾರವಿದೆ).

ಜಾಗತಿಕವಾಗಿ 2022ರಲ್ಲಿ ಜಗತ್ತಿನ ಒಟ್ಟೂ ಜನಸಂಖ್ಯೆ 804.5 ಕೋಟಿ ಆಗಿದೆ (ವಿಶ್ವಸಂಸ್ಥೆ). ಈ ಜನಸಂಖ್ಯೆ 2050ರ ತನಕ ಹೆಚ್ಚಿ ನಂತರ ಕುಸಿತವನ್ನು ಕಾಣಬಹುದು. ಜಗತ್ತಿನಲ್ಲಿರುವ ಆಹಾರ ಉತ್ಪಾದನೆ ಸಾಮರ್ಥ್ಯ, ಕುಡಿಯುವ ನೀರಿನ ಲಭ್ಯತೆ ಹಾಗೂ ಇನ್ನಿತರ ಸಂಪನ್ಮೂಲಗಳಿಗೆ ಹೋಲಿಸಿದರೆ ಈ ಅಗಾಧ ಜನಸಂಖ್ಯೆ ಆತಂಕವನ್ನು ಉಂಟು ಮಾಡಿದೆ. ಆಹಾರಕ್ಕಾಗಿ ಮತ್ತು ಇತರ ಸಂಪನ್ಮೂಲಗಳಿಗಾಗಿ ಜಾಗತಿಕವಾಗಿ (ಆಂತರಿಕವಾಗಿ ದೇಶಗಳಲ್ಲಿ ಮತ್ತು ದೇಶದೇಶಗಳ ನಡುವೆ) ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸ್ವಾತಂತ್ರ್ಯದ ಹರಣ, ಯುದ್ಧಗಳು, ಆಕ್ರಮಣಗಳು, ಅತ್ಯವಶ್ಯಕ ವಸ್ತುಗಳು, ಆಹಾರ, ಔಷಧಿಗಳ ಮುಕ್ತ ಓಡಾಟ/ವ್ಯಾಪಾರ, ವಿನಿಮಯಕ್ಕೆ ಅಡ್ಡಿ ಆಗುವ ಭಯ ಮತ್ತು ಅವು ಮಕ್ಕಳ ಮೇಲೆ ಅಗಾಧ ಪ್ರಭಾವ ಬೀರುವ ಸಾಧ್ಯತೆಗಳು ದಟ್ಟವಾಗಿ ಇವೆ.

ಮಕ್ಕಳ ಹಕ್ಕುಗಳು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು ಎಂಬ ಉದಾತ್ತವಾದ ಕಲ್ಪನೆಗಳನ್ನು ಇಂದಿನ ಸಾವಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. ಇವನ್ನು ಈಗ ನಿರ್ಲಕ್ಷಿಸಿದರೆ ದೀರ್ಘಕಾಲಿಕ ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈಗಿಂದೀಗಲೇ ಎಲ್ಲ ಹಂತಗಳಲ್ಲಿರುವ ಆಡಳಿತಗಾರರು ಮತ್ತು ಸಾಮಾನ್ಯ ಜನರು ಮಕ್ಕಳ ದೃಷ್ಟಿಕೋನದಲ್ಲಿ ಇವುಗಳನ್ನು ತುರ್ತಾಗಿ ಗಮನಿಸಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!