Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹಿರಿಯರಿಗಾಗಿ ಸಮಗ್ರ ಯೋಜನೆ

1992ರಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಿರಿಯ ನಾಗರಿಕರಿಗೆ ಆಹಾರ, ನೀರು, ವಸತಿ, ಆರೋಗ್ಯ ರಕ್ಷಣೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಹಿರಿಯ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ವೃದ್ಧರಿಗಾಗಿ ಸಮಗ್ರ ಕಾರ್ಯಕ್ರಮದ ಯೋಜನೆಯನ್ನು ಪ್ರಾರಂಭಿಸಿತು.

ಈ ಉದ್ದೇಶಕ್ಕಾಗಿ ಯೋಜನೆ ಸರ್ಕಾರಿ ಮತ್ತು ಸರ್ಕಾರೇತರ ಏಜೆನಿಗಳು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಇತರೆ ಸ್ಥಳೀಯ ಸಂಸ್ಥೆಗಳು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇದಲ್ಲದೆ ವೃದ್ಧಾಶ್ರಮಗಳು, ಡೇ ಕೇರ್ ಸೆಂಟರ್ ಗಳನ್ನು ಸ್ಥಾಪಿಸಲು, ನಿರ್ವಹಿಸಲು ಎನ್‌ಜಿಒ ಗಳಿಗೆ ಯೋಜನಾ ವೆಚ್ಚದ ಶೇ.90ವರೆಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಆರ್ಥಿಕ ಸಹಾಯವನ್ನು ಹೆಚ್ಚಿಸಲು ಮತ್ತು ವೃದ್ಧರಿಗೆ ಸಂಬಂಧಿಸಿದ ಇತರ ನವೀನ ಯೋಜನೆಗಳನ್ನು ಸೇರಿಸಲಾಯಿತು.

ಈ ಯೋಜನೆಯನ್ನು 2008ರಲ್ಲಿ ಪರಿಷ್ಕರಿಸಿದ್ದರೂ ವಯಸ್ಸಾದವರ ವೈವಿಧ್ಯಮಯ ಅಗತ್ಯಗಳನ್ನು ಸೇರಿಸಲು ಅದನ್ನು ಹೊಂದಿಕೊಳ್ಳುವಂತೆ ಮಾಡಲು ಯೋಜನೆಯನ್ನು 2015ರಲ್ಲಿ ಮತ್ತಷ್ಟು ಪರಿಷ್ಕರಿಸಲಾಗಿದೆ.

Tags: