Mysore
27
scattered clouds

Social Media

ಗುರುವಾರ, 26 ನವೆಂಬರ್ 2026
Light
Dark

ಜಿಲ್ಲೆಗಳು

Homeಜಿಲ್ಲೆಗಳು

ಮಂಡ್ಯ: ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಾವಯವ ಸಿರಿಧಾನ್ಯ ಹಬ್ಬ, ಆಹಾರ ಮೇಳ ಮತ್ತು ವಸ್ತು ಪ್ರದರ್ಶನದಲ್ಲಿ 62 ವರ್ಷದ ವೃದ್ಧರೋರ್ವರು ಬರೋಬ್ಬರಿ 10 ಮುದ್ದೆ ಸೇವಿಸುವ ಮೂಲಕ ಪ್ರಥಮ ಸ್ಥಾನ ಪಡೆದು …

ಹೊಸ ವರ್ಷದ ಹರ್ಷ ಮುಕ್ತಾಯವಾದ ಬೆನ್ನಲ್ಲೇ ಹಲವು ಕಡೆಗಳಿಂದ ಸಾವು ನೋವಿನ ಸುದ್ದಿಗಳು ಕೇಳಿ ಬರುತ್ತಿವೆ. ಹೌದು, ಮೋಜು ಮಸ್ತಿಯ ಮೂಡ್‌ನಲ್ಲಿದ್ದ ಕೆಲ ಮಂದಿ ಹೊಸ ವರ್ಷದ ಸಂತಸದ ಬೆನ್ನಲ್ಲೇ ಅಪಘಾತಕ್ಕೀಡಾಗಿದ್ದಾರೆ. ಹುಣಸೂರಿನಲ್ಲಿ ಕೆಎಸ್‌ಆರ್‌ಟಿಸಿ ಇವಿ ಪ್ಲಸ್‌ ಹಾಗೂ ಜೀಪ್‌ ನಡುವೆ …

ಡಿಸೆಂಬರ್‌ 26ರಂದು ನಂಜನಗೂಡಿನಲ್ಲಿ ನಡೆಯಬೇಕಿದ್ದ ಅಂಧಕಾಸುರ ಸಂಹಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಭಕ್ತರು ಅಂಧಕಾಸುರನ ಚಿತ್ರವನ್ನು ಸಂಹಾರ ಮಂಟಪ ವೃತ್ತದಲ್ಲಿ ರಂಗೋಲಿನಲ್ಲಿ ಬರೆಯುತ್ತಾರೆ. ಬಳಿಕ ಉತ್ಸವಮೂರ್ತಿಯನ್ನು ಈ ರಂಗೋಲಿ ಬಳಿಕ ತಂದು ಕಾಲಿನಿಂದ ಅಂಧಕಾಸುರನ ರಂಗೋಲಿಯನ್ನು ಅಳಿಸಿಹಾಕುವ ಮೂಲಕ ಅಂಧಕಾಸುರ ವಧೆಯನ್ನು ಆಚರಿಸಲಾಗುತ್ತದೆ. …

• ಶ್ರೀಧರ್ ಆರ್.ಭಟ್ ನಂಜನಗೂಡು: 13 ವರ್ಷಗಳ ಹಿಂದೆ ಮೈಸೂರು ವಿಭಾಗದಿಂದ ಚಾಮರಾಜ ನಗರದ ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ವಲಸೆ ಹೋಗಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ನಂಜನಗೂಡು ಘಟಕ ಇದೀಗ ಮತ್ತೆ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುವುದರೊಂದಿಗೆ ತವರಿಗೆ ಮರಳಿದಂತಾಗಿದೆ. 2011ರಲ್ಲಿ ಚಾಮರಾಜನಗರದಲ್ಲಿ …

ಮಂಡ್ಯ: ಕೋಳಿ ಫಾರಂನಲ್ಲಿ ಮಾಂಸದ ಕೋಳಿ ತುಂಬುವಾಗ ಮೋಸ ಮಾಡಲು ಯತ್ನಿಸಿದವರನ್ನು ರೈತನೋರ್ವ ಮರಕ್ಕೆ ಕಟ್ಟಿ ಹಾಕಿದ ಘಟನೆ ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಬ್ಯಾಡರಹಳ್ಳಿ ಗ್ರಾಮದ ರೈತ ಹನುಮಂತೇಗೌಡಗೆ ಸೇರಿದ ಕೋಳಿಫಾರಂನಲ್ಲಿ ವಂಚನೆ ಪ್ರಕರಣ ನಡೆದಿದೆ. ರೈತ ತಮ್ಮ …

ಚಾಮರಾಜನಗರ: ಹನೂರು ತಾಲ್ಲೂಕಿನ ಹೊಗೇನಕಲ್ ಜಲಪಾತದಲ್ಲಿ ತೆಪ್ಪ ಓಡಿಸುವವರು ತೆಪ್ಪದ ಶುಲ್ಕವನ್ನು ಹೆಚ್ಚು ಮಾಡಲು ಇದೇ ಜನವರಿ 10ರವರೆಗೆ ಗಡುವು ನೀಡಿದ್ದು, ಅರಣ್ಯ ಇಲಾಖೆ ಶುಲ್ಕ ಹೆಚ್ಚು ಮಾಡದಿದ್ದರೆ ತೆಪ್ಪ ಓಡಾಟವನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. ಹೊಗೇನಕಲ್ ಜಲಪಾತ ವೀಕ್ಷಣೆಗೆ ನಿತ್ಯ ಜಿಲ್ಲೆ-ರಾಜ್ಯಾದ್ಯಂತ …

ಮಂಡ್ಯ: ಮಂಡ್ಯ ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಭಕ್ತರ ಹಿಂಡೆ ಬರುತ್ತಿದ್ದು, ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಪಾಂಡುಪುರ ತಾಲೂಕಿನ ಮೇಲಕೋಟೆ ಚೆಲುವರಾಯಸ್ವಾಮಿ ದೇವಾಲಯದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿ ಆದೇಶಿಸಲಾಗಿದೆ. ಐತಿಹಾಸಿಕ ಹಿನ್ನಲೆಯುಳ್ಳ ಈ ದೇವಾಲಯಕ್ಕೆ ವರ್ಷದ ಮೊಲದ ದಿನ ಸ್ವಾಮಿಯ ದರ್ಶನ ಪಡೆಯಲು ತಂಡೋಪ …

ಮಂಡ್ಯ: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಮತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ನಡೆದಿದೆ. ಹೊಸ ವರ್ಷದ ಮೊದಲ ದಿನವಾದ ಸೋಮವಾರ ಮುಂಜಾನೆ ೩ರ ಸಮಯದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ.ಹೊಸೂರು ಗೇಟ್ ಹಾಗೂ ಗರುಡನ ಉಕ್ಕಡ ಗ್ರಾಮಗಳ …

ಚಾಮರಾಜನಗರ: ಹೊಸ ವರ್ಷ ಪ್ರಯುಕ್ತ ನೂರಾರು ಪ್ರವಾಸಿಗರು ನೆರೆಯ ಪ್ರೇಕ್ಷಣೀಯ ಸ್ಥಳಗಳಿಗೆ ದೌಡಾಯಿಸುವುದು ಸಾಮಾನ್ಯವೇ. ಅದರಂತೆಯೇ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹಿಮವದ್ ಗೋಪಾಲಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಜಿಲ್ಲೆ ಗುಂಡ್ಲುಪೇಟೆ …

ಮೈಸೂರು : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಬಂಧ ಮುನ್ನೆಚ್ಚರಿಕೆಯಾಗಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಪರೀಕ್ಷೆಗಳನ್ನು ನಡೆಸುವಂತೆ …

Stay Connected​
error: Content is protected !!