ಬೆಂಗಳೂರು : ಕಾಂಗ್ರೆಸ್ ಜೊತೆ ನಮ್ಮ ಪಕ್ಷ ಮೈತ್ರಿ ಮಾಡಿಕೊಂಡಿದ್ದಾಗ ಹಂತ ಹಂತವಾಗಿ ನಮ್ಮನ್ನು ಮುಗಿಸಲು ಪ್ರಯತ್ನ ಮಾಡಿದ್ದು ನನಗೆ ಚಿನ್ನಾಗಿ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಂಬಿ ಅವರ ಜೊತೆ ಮೈತ್ರಿ ಮಾಡಿಕೊಂಡಿರುವ ಸಂದರ್ಭದಲ್ಲಿ ನಮ್ಮ ಪಕ್ಷವನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ನನಗೆ ಚೆನ್ನಾಗಿ ತಿಳಿದಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮೈತ್ರಿ ಸಂದರ್ಭದಲ್ಲಿ ನಮ್ಮ ಪಕ್ಷವನ್ನು ಮುಗಿಸಲು ಹಂತ ಹಂತವಾಗಿ ವಿಶ ಹಾಕಿಕೊಂಡು ಬಂದಿದ್ದೀರಿ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಸಂದರ್ಭದಲ್ಲಿ ಎಂದಿಗೂ ನನ್ನನ್ನಾಗಲಿ ನನ್ನ ಪಕ್ಷವನ್ನಾಗಲಿ ನಿಮ್ಮಂತೆ ಕೀಳು ಮಟ್ಟದಲ್ಲಿ ನಡೆಸಿಕೊಂಡಿಲ್ಲ ಎಂದು ತಿಳಿಸಿದರು.
ನೀವು ನಮ್ಮ ಪಕ್ಷದ ಕಾರ್ಯಕರ್ತರನ್ನು ಕಾಪಡುವ ಮಾತನಾಡುತ್ತೀರ. ನಿಮ್ಮ ಯಾವುದೇ ರಕ್ಷಣೆ ನಮಗೆ ಬೇಕಿಲ್ಲ ಎಂದು ತಿಳಿಸಿದರು.


