ಅಹಮದಾಬಾದ್ : ಐಸಿಸಿ ಏಕದಿನ ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಜ್ವರದಿಂದಾಗಿ ಮೊದಲೆರಡು ಪಂದ್ಯಗಳಿಗೆ ಗೈರಾಗಿದ್ದ ಗಿಲ್ ಈ ಪಂದ್ಯದಲ್ಲಿ ಆಡಲಿದ್ದಾರೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
1992ರಿಂದ ಭಾರತ-ಪಾಕ್ ತಂಡಗಳು 7 ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, ಏಳು ಬಾರಿಯೂ ಜಯ ಸಾಧಿಸಿರುವ ಭಾರತವು ಅಜೇಯ ದಾಖಲೆಯನ್ನು ಉಳಿಸಿಕೊಂಡಿದೆ. ಆದರೆ ಈ ಎರಡು ದೇಶಗಳ ನಡುವಿನ ಸ್ಪರ್ಧೆಯು ಸಾಮಾಜಿಕ-ರಾಜಕೀಯ ಆಯಾಮವನ್ನು ಪಡೆದಿದ್ದು, ಇದು ಮೈದಾನದ ಹೊರಗೂ ಸದ್ದು ಮಾಡುತ್ತದೆ.
ಭಾರತ ತಂಡದಲ್ಲಿ ಒಂದು ಬದಲಾವಣೆ ಆಗಿದ್ದು, ಆರಂಭಿಕ ದಾಂಡಿಗ ಶುಭಮನ್ ಗಿಲ್ ತಂಡಕ್ಕೆ ಮರಳಿದ್ದು, ಈಶಾನ್ ಕಿಶಾನ್ ತಂಡದಿಂದ ಹೊರಗುಳಿದಿದ್ದಾರೆ. ಪಾಕಿಸ್ತಾನ ತಂಡ ಯಾವುದೇ ಬದಲಾವಣೆ ಮಾಡಿಲ್ಲ.