ನವದೆಹಲಿ : ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (ಭಾರತೀಯ ಜನತಾ ಪಕ್ಷ) ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, 90 ರಲ್ಲಿ 53 ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್ ಆಡಳಿತವನ್ನು ಕೊನೆಗಾಣಿಸಲಿದೆ ಎಂಬುದು ಬಹುತೇಕ ಖಚಿತವಾಗಿದೆ.
ಆದರೆ, ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಪ್ರಕಟವಾಗದ ಕಾರಣ ಪಕ್ಷವು ತನ್ನ ನಾಯಕನನ್ನು ಆಯ್ಕೆ ಮಾಡುವಾಗ ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳ ಜೊತೆಗೆ ಹಳೆಯ ಮತ್ತು ಹೊಸ ಮುಖಗಳ ಆಕಾಂಕ್ಷೆಗಳನ್ನು ಸಮತೋಲನಗೊಳಿಸಬೇಕಾಗುತ್ತದೆ. ಈ ಮೂಲಕ ಯಾರಿಗೆ ಛತ್ತೀಸ್‌ಗಢದ ಗದ್ದುಗೆ ದೊರೆಲಿದೆ ಎಂಬುದನ್ನು ಕಾದುನೊಡಬೇಕಿದೆ.
ಅಧಿಕಾರ ಹಿಡಿಯುವ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 24 ಗಂಟೆ ವಿದ್ಯುತ್, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಎಲ್ಲರಿಗೂ ಉಚಿತ ಆರೋಗ್ಯ ವಿಮೆ, ರೈತರ ಆದಾಯ ದ್ವಿಗುಣಗೊಳಿಸುವಂತಹ ಭರವಸೆಗಳನ್ನು ನೀಡಿದ್ದು, ಇದನ್ನು ಈಡೇರಿಸುವ ಜವಾಬ್ದಾರಿ ನೂತನ ಮುಖ್ಯಮಂತ್ರಿಯದ್ದಾಗಿದೆ.
ಛತ್ತೀಸ್‌ಗಢ ಸಿಎಂ ಹುದ್ದೆಗೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ.!
ಮಹಿಳಾ ಕ್ರಿಕೆಟಿಗ-ರಾಜಕಾರಣಿಯಾಗಿರುವ ರೇಣುಕಾ ಸಿಂಗ್, ಬಿಜೆಪಿಯ ಛತ್ತೀಸ್‌ಗಢ ಘಟಕದ ಪ್ರಸ್ತುತ ಅಧ್ಯಕ್ಷ ಮತ್ತು ಬಿಲಾಸ್‌ಪುರ ಸಂಸದರಾಗಿರುವ ಅರುಣ್ ಸಾವೊ, ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಮಾಜಿ ಐಎಎಸ್ ಅಧಿಕಾರಿ ಮತ್ತು ಮೊದಲ ಬಾರಿಗೆ ಶಾಸಕರಾಗಿರುವ ಓಪಿ ಚೌಧರಿ, ಹಿರಿಯ ನಾಯಕ ಭಗವಾನ್ ವಿಷ್ಣು, ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ಸೋದರಳಿಯ ವಿಜಯ್ ಬಾಘೆಲ್ ಸೇರಿದಂತೆ ಹಲವು ಘಟಾನುಘಟಿ ನಾಯಕರ ಹೆಸರುಗಳು ಕೇಳಿಬುರತ್ತಿವೆ.
ಬಿಜೆಪಿ ಹೈ ಕಮಾಂಡ್ ಯಾರಿಗೆ ಒಲವು ತೋರಿಸಲಿದೆ. ಮತ್ತು ಛತ್ತೀಸ್‌ಗಢದ ಮುಂದಿನ ಮುಖ್ಯಮಂತ್ರಿಯಾಗಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
2018ರ ಚುನಾವಣೆ ನೋಟ : 90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಯಲ್ಲಿ ಕಾಂಗ್ರೆಸ್ 71 ಸ್ಥಾನಗಳನ್ನು ಗೆದ್ದುಕೊಂಡು ಏಕೈಕ ಪಕ್ಷವಾಗಿ ಅಧಿಕಾರ ಹಿಡಿದಿತ್ತು. 2003ರಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿಗೆ 2018ರ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತ್ತು. ಇದೀಗ ಮತ್ತೆ ಬಿಜೆಪಿ ತನ್ನ ಕಮಾಲ್ ಮುಂದುವರೆಸಿದ್ದು, ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ.





