Mysore
23
scattered clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಭಜರಂಗ ದಳ-ಪಿಎಫ್ಐ ನಿಷೇಧದಿಂದ ಏನು ಲಾಭ : ಎಚ್‌ಡಿಕೆ ಪ್ರಶ್ನೆ

ಕೊಪ್ಪಳ : ಭಜರಂಗ ದಳ ಹಾಗು ಪಿಎಫ್ಐ ನಿಷೇಧದಿಂದ ಏನು ಲಾಭ ಭಜರಂಗದಲ್ಲಿ ಹಿಂದುಳಿದ ವರ್ಗಗಳ ಮಕ್ಕಳನ್ನು ಭಾವಾತ್ಮಕ ಮೆದುಳಿಗೆ ತುರಕಿ ಅವರ ಮುಖಾಂತರ ಚಟುವಟಿಕೆ ಮಾಡುತ್ತಿದ್ದಾರೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುವಂಥದ್ದೇನು ಅಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಚುನಾವಣೆಯ ಅಂತಿಮ ದಿನದತ್ತ ಹೋಗುತ್ತಿದ್ದೇವೆ. ಎರಡೂ ರಾಷ್ಟ್ರೀಯ ಪಕ್ಷಗಳು ಈಗ ಆತ್ಮಿಯತೆ ಕಾಣುತ್ತೆ. ಕರ್ನಾಟಕ ಸಂಕಷ್ಟದಲ್ಲಿದ್ದಾಗ ಬಂದಿದ್ದರೆ ವಿಶ್ವಾಸ ಮೂಡುತ್ತಿತ್ತು. ಪಿಎಂ ಈಗ ಜನಕ್ಕೆ ಕೈ ಬಿಸಿ ಹೋಗುತ್ತಾರೆ ಎಂದರು.

ರೋಡ್ ಶೋನಲ್ಲಿ ಜನ ಹಾಗು ಅವರ ಮುಖಂಡರ ಮಧ್ಯೆ ಎಷ್ಟು ಸಹಕಾರ ಗೊತ್ತಿಲ್ಲ. ಮೋದಿಯವರ ಚಾರ್ಮ್ ಈಗ ಕಡಿಮೆಯಾಗಿದೆ. 9 ವರ್ಷವಾಯಿತು ಈಗ ಬದಲಾಗಿದೆ. ಬಿಜೆಪಿಯವರಿಗೆ ಬೊಮ್ಮಾಯಿ ಮುಖವಿಲ್ಲ. ಆದರೆ ಮೋದಿ ಮುಖ ತೋರಿಸುತ್ತಾರೆ. ಹಳೆಯ ಮೈಸೂರು ಭಾಗದಲ್ಲಿ ಈ ಬಾರಿ 10 ಜನ ಆಯ್ಕೆಯಾಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಅವರು ಅಧಿಕಾರ ಅಮೃತ ಆಚರಣೆ ಮಾಡಲು ಹೊರಟಿದ್ದಾರೆ. ಕಲ್ಯಾಣ ಕರ್ನಾಟಕವನ್ನು ವಿರೋಧ ಪಕ್ಷದವರು ಮರೆತಿದ್ದಾರೆ ಎಂದು ಬಿಜೆಪಿ ಹೇಳಿದೆ. ಕಲ್ಯಾಣ ಕರ್ನಾಟಕಕ್ಕೆ ಏನು ಯೋಜನೆ ಕೊಟ್ಟಿದ್ದಾರೆ. ಕೃಷ್ಣಾ ನ್ಯಾಯಾಧಿಕರಣ ತೀರ್ಪು ಬಂದು 10 ವರ್ಷವಾಯಿತು. ಈ ಅವಧಿಯಲ್ಲಿ ಎರಡೂ ಪಕ್ಷಗಳು ಏನು ಮಾಡಿದ್ಧಾರೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!