Mysore
20
broken clouds

Social Media

ಸೋಮವಾರ, 26 ಜನವರಿ 2026
Light
Dark

ಮಣಿಪುರ ವಿಚಾರದಲ್ಲಿ ಮೋದಿಯವರ ಮೌನದ ಹಿಂದಿನ ಮರ್ಮವೇನು: ದಿನೇಶ್ ಗುಂಡೂರಾವ್

ಬೆಂಗಳೂರು : ಮಣಿಪುರ ಗಲಭೆಯ ಬಗ್ಗೆ ಸುಪ್ರೀಂ ಕೋರ್ಟ್ ಎಚ್ಚರಿಸುತ್ತಿದ್ದರೂ ಮೌನ ವಹಿಸಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಣಿಪುರ ಗಲಭೆ ಸಂಬಂಧ ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪದೇ ಪದೇ ಚಾಟಿ ಬೀಸುತ್ತಲೇ ಇದೆ. ಇಷ್ಟಾದರೂ ಡಬಲ್ ಇಂಜೀನ್ ಸರ್ಕಾರದ ದಪ್ಪ ಚರ್ಮಕ್ಕೆ ಯಾವುದೇ ಚಾಟಿ ಏಟು ತಾಗುತ್ತಿಲ್ಲ. ಮಣಿಪುರ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿರುವ ಕೇಂದ್ರ ಭಾರತದ ನೆಲದಲ್ಲಿ ಸುದೀರ್ಘ ರಕ್ತಸಿಕ್ತ ಅಧ್ಯಾಯ ಬರೆಯಲು ಮುಂದಾಗಿದೆ ಎಂದು ಹೇಳಿದ್ದಾರೆ.

ಮಣಿಪುರ ವಿಚಾರದಲ್ಲಿ ಪ್ರಧಾನಿಯವರು ಯಾಕೆ ಮೌನ ಮುರಿಯುತ್ತಿಲ್ಲ? ಅವರ ಮೌನದ ಹಿಂದಿರುವುದು ಅಸಹಾಯಕತೆಯೋ ಅಥವಾ ರಾಜಕೀಯ ಲಾಭ ಗಳಿಸುವ ಕುಯುಕ್ತಿಯೋ ತಿಳಿಯುತ್ತಿಲ್ಲ. ಗುಜರಾತ್ ಗಲಭೆ ಸಂದರ್ಭದಲ್ಲೂ ಮೋದಿ ಇದೇ ಮೌನ ವಹಿಸಿದ್ದರು. ಈಗ ಪ್ರಧಾನಿಯಾದಾಗಲೂ ಮಣಿಪುರ ವಿಚಾರದಲ್ಲಿ ಮೌನವಹಿಸಿದ್ದಾರೆ. ಮೋದಿಯವರ ಮೌನದ ಹಿಂದಿನ ಮರ್ಮವೇನು? ಎಂದು ಪ್ರಶ್ನಿಸಿದ್ದಾರೆ.

ಧಾನಿ ಮೋದಿ ಅವರು ಯಾವಾಗ ಮೌನವಾಗಿರುತ್ತಾರೆ, ಯಾವಾಗ ಮಾತನಾಡುತ್ತಾರೆ ಎಂಬ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೋದಿಯವರ ಮೌನ ಹಾಗೂ ಮಾತನಾಡುವ ಸಂದರ್ಭಗಳನ್ನು ಪಟ್ಟಿ ಮಾಡಿದ್ದಾರೆ

ಮೋದಿಯವರು ಮೌನವಾಗುವ ಸಂದರ್ಭಗಳು.

* ಗಲಭೆಗಳಾದಾಗ

* ಸಾಮೂಹಿಕ ನರಮೇಧಗಳಾಗುವಾಗ

* ಮಹಿಳೆಯರ ನಗ್ನ ಮೆರೆವಣಿಗೆಯಾಗುವಾಗ

* ಬೆಲೆಯೇರಿಕೆಯಾದಾಗ

* PMCares ಫಂಡ್ ಬಗ್ಗೆ ಕೇಳಿದಾಗ

* 2 ಕೋಟಿ ಉದ್ಯೋಗದ ಬಗ್ಗೆ ಕೇಳಿದಾಗ

ಕಪ್ಪುಹಣದ ಬಗ್ಗೆ ಕೇಳಿದಾಗ

* ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ ಈ ಸಂದರ್ಭಗಳಲ್ಲಿ ಮೋದಿ ಕಠೋರ ಮೌನ ತಪಸ್ವಿಗಳಾಗುತ್ತಾರೆ.

ಮೋದಿಯವರು ಮಾತನಾಡುವ ಸಂದರ್ಭಗಳು.

* ಚುನಾವಣೆ ಬಂದಾಗ

* ಪ್ರಚಾರಕ್ಕೆ ಕರೆದಾಗ

* ಮನ್ ಕಿ ಬಾತ್ ಕಾರ್ಯಕ್ರಮವಿದ್ದಾಗ

* ಎದುರಿಗೆ ಪ್ರಶ್ನೆ ಮಾಡದ ಪತ್ರಕರ್ತರಿಲ್ಲದಿದ್ದಾಗ

* ಜೀ ಹುಜೂರ್ ಎಂದು ಅಡ್ಡಡ್ಡ ಬೀಳುವ ತಮ್ಮ‌ ಪಕ್ಷದ ನಾಯಕರು ಎದುರಿರುವಾಗ ಈ ಸಂದರ್ಭಗಳಲ್ಲಿ ‌ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ ಎಂದು ಟೀಕಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!