ಮೈಸೂರು : ಪಕ್ಷದಲ್ಲಿರುವ ಸಣ್ಣಪುಟ್ಟ ಗೊಂದಲಗಳಿದ್ದರೂ ಸಹ ಪಕ್ಷದ ಹಿತದೃಷ್ಠಿಯಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾವೆಲ್ಲಾ ಒಂದಾಗಿ, ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ರಾಷ್ಟ್ರೀಯ ಪಕ್ಷ ವಾದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ. ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ. ಎಲ್ಲಾ ಸಮಸ್ಯೆಯನ್ನು ಬಗೆಹರಿಸುತ್ತಿದ್ದೇವೆ. ಈಶ್ವರಪ್ಪ ಅವರ ಸಮಸ್ಯೆ ಕೂಡ ಬಗೆಹರೆಯುತ್ತದೆ ಎಂಬ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ನಾಯಕರ ಸಮ್ಮುಖದಲ್ಲೇ ತೀರ್ಮಾನವಾಗಿದೆ : ಟಿಕೆಟ್ ವಿಚಾರದಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮಾತು ಕೇಳಿಕೊಂಡು ತೀರ್ಮಾನಗಳನ್ನು ಕೈಗೊಳ್ಳುವ ನಾಯಕತ್ವ ನಮ್ಮದಲ್ಲ. ಕೇಂದ್ರದಲ್ಲಿ ಮೋದಿ, ಅಮಿತ್ ಶಾ, ನಡ್ಡ ಅವರಂತಹ ಬಲಿಷ್ಠ ನಾಯಕರಿದ್ದಾರೆ. ಇವರೆಲ್ಲರೂ ರಾಜ್ಯ ನಾಯಕರ ಸಮ್ಮುಖದಲ್ಲೇ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಕೇವಲ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮಾಡಿರುವ ತೀರ್ಮಾನ ಅಲ್ಲ ಎಂದು ತಿಳಿಸಿದರು.
ದಾಖಲೆ ಅಂತರದಲ್ಲಿ ಗೆಲ್ಲುತೇವೆ : ದಾಖಲೆ ಅಂತರದಿಂದ ಮೈಸೂರು-ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ಆ ವಿಶ್ವಾಸದಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಮತ್ತು ಕ್ಷೇತ್ರದ ಮತದಾರರೂ ಇದ್ದಾರೆ. ನರೇಂದ್ರ ಮೋದಿ ಅವರ ಮೇಲಿರುವ ಪ್ರೀತಿಯ ಪರಿಣಾಮ ಮೈತ್ರಿ ಪಕ್ಷಗಳು ರಾಜ್ಯದ ಎಲ್ಲಾ ಕ್ಷೇತ್ರದಲ್ಲೂ ಗೆಲುತ್ತದೆ.
ಸಂಕಲ್ಪ ಈಡೇರಿಸಲು ಚಾಮುಂಡೇಶ್ವರಿಗೆ ಪ್ರರ್ಥನೆ : ರಾಜ್ಯದಲ್ಲಿ ಭೀಕರ ಬರಗಾಲ ಇದೆ. ೪೦೦ ಸ್ಥಾನಗಳನ್ನು ಪಡೆಯುವ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸುಭದ್ರ ಸರ್ಕಾರ ನಿರ್ಮಾಣ ಆಗಬೇಕು . ಪ್ರಧಾನಿ ತಮ್ಮ ಗುರಿ ತಲುಪಬೇಕು. ರಾಜ್ಯದ ಮೈತ್ರಿಕೂಟ ೨೮ ಕ್ಷೇತ್ರದಲ್ಲಿ ಗೆದ್ದು ಪ್ರಧನಿ ಕೈ ಬಲ ಪಡಿಸಬೇಕು. ಈ ಎಲ್ಲಾ ಸಂಕಲ್ಪ ಈಡೇರಿಸಲು ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಜನಪ್ರೀಯತೆ ಕಳೆದುಕೊಂಡ ಸರ್ಕಾರ : ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ, ಮುಖಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಮಂತ್ರಿಮಂಡಳ ಸಂಪೂರ್ಣವಾಗಿ ಗಾಬರಿಯಾಗಿದ್ದಾರೆ. ಯಾವುದೋ ಒಂದು ಭ್ರಮೆಯಲ್ಲಿದ್ದ ಮುಖ್ಯಮಂತ್ರಿಗಳು ಹಾಗೂ ಮಂತ್ರಿಮಂಡಳಕ್ಕೆ ಇಂದು ಜ್ಞಾನೋದಯವಾಗಿದೆ. ರಾಜ್ಯ ಸರ್ಕಾರ ಶೂನ್ಯ ಸಾಧನೆ ಮಾಡಿದೆ. ಯಾವುದೇ ಅಭಿವೃದ್ದಿ ಮಾಡ ಈ ಸರ್ಕಾರ ರಾಜ್ಯದ ಬಡವರು, ರೈತರು ಹಾಗೂ ಹಿಂದುಳಿದವರಿಗೆ ಶಾಪವಾಗಿ ಪರಿಣಮಿಸಿದೆ.
ಒಂದು ರೀತಿ ರಾಜ್ಯ ಸರ್ಕಾರವೇ ತನ್ನ ವಿಶವಾಸವನ್ನು ಕಳೆದುಕೊಂಡಿದೆ. ದೇಶದಲ್ಲೇ ಕಡಿಮೆ ಅವಧಿಯಲ್ಲಿ ಜನಪ್ರೀಯತೆ ಕಳೆದುಕೊಂಡ ಸರ್ಕಾರ ಇದ್ದರೆ ಅದು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ. ಅದರ ಪರಿಣಾಮ ಮುಂದಿನ ದಿನಗಳಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.