Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನಾವು ಬಿಜೆಪಿಯವರ ರೀತಿ ಮೂಢನಂಬಿಕೆ ಇಟ್ಟುಕೊಂಡಿಲ್ಲ : ಬಿಕೆ ಹರಿಪ್ರಸಾದ್​

ಕಲಬುರಗಿ : ಕಾಂಗ್ರೆಸ್ ವೈಜ್ಞಾನಿಕ ನೆಲಗಟ್ಟಿನಲ್ಲಿ ಅಚಲ ನಂಬಿಕೆ ಇಟ್ಟುಕೊಂಡಿದೆ. ನಾವು ಬಿಜೆಪಿಯವರ ರೀತಿ ಮೂಢನಂಬಿಕೆ ಇಟ್ಟುಕೊಂಡಿಲ್ಲ. ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆಗೆ ಜಾಗ ನೀಡಿದ್ದು ಕಾಂಗ್ರೆಸ್ ಸರ್ಕಾರ. ನಾವು ಬಿತ್ತಿರುವ ಬೀಜದ ಮರದ ಹಣ್ಣನ್ನು ಬಿಜೆಪಿಯವರು ತಿನ್ನುತ್ತಿದ್ದಾರೆ. ಚಂದ್ರಯಾನದ ಬಹುತೇಕ ವಿಜ್ಞಾನಿಗಳು ಹಿಂದುಳಿದ ವರ್ಗದವರು. ಅಧಿಕಾರ ಬಂದಾಗ ಕೆಲವೇ ಸಮುದಾಯ ಅಧಿಕಾರ ಅನುಭವಿಸುತ್ತಿದೆ. ಎಲ್ಲಾ ವರ್ಗದವರಿಗೂ ಅಧಿಕಾರ ಸಿಗುವಂತಾಗಲಿ ಎಂದು ವಿಧಾನ್ ಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್​ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿ ಬಂದ ಮೇಲೆ ಘೋಷಣೆಗಳಿಗೆ ಏನು ಕಡಿಮೆ ಇಲ್ಲ. ರಾಷ್ಟ್ರದಲ್ಲಿನ ವೈವಿದ್ಯತೆಯನ್ನು ಹಾಳು ಮಾಡುತ್ತಿದ್ದಾರೆ. ವಿವೇಕಾನಂದರ ಆಶಯದ ವಿರುದ್ಧ ಬಿಜೆಪಿ ನಿರ್ಧಾರ ಕೈಗೊಳ್ಳುತ್ತದೆ. ಮುಂದೆ ಒನ್ ನೇಷನ್ ಒನ್ ಲೀಡರ್ ಅಂದರೂ ಅನ್ನಬಹುದು. ದೇಶದಲ್ಲಿ ಚುನಾವಣೆಯನ್ನು ಇಡಿ ಬಳಸದೆ ನಡೆಸಬೇಕಿದೆ ಎಂದರು.

ಇನ್ನು ತಮಗೆ ಅವರಿಗೆ ಮಂತ್ರಿಸ್ಥಾನ ಸಿಗದೆ ಇರುವ ವಿಚಾರವಾಗಿ ಮಾತನಾಡಿದ ಅವರು ನಾನು ಪಕ್ಕಾ ಕಾಂಗ್ರೆಸ್​ನವನು. ನನ್ನ ಹೋರಾಟ ನನ್ನ ಮಂತ್ರಿ ಮಾಡಿಲ್ಲ ಅಂತ ಅಲ್ಲ. ಸಣ್ಣ ಸಮುದಾಯಗಳಿಗೆ ಅವಕಾಶ‌ ಸಿಗಬೇಕು ಅನ್ನೋದು ನಮ್ಮ ಹೋರಾಟ. ಅದಕ್ಕಾಗಿ ನಾನು ಬೀದಿಗಳಿದು ಹೋರಾಟಕ್ಕೂ ಕೂಡಾ ಸಿದ್ದನಿದ್ದೇನೆ. ಇಂದಿರಾಗಾಂಧಿ ಅವರನ್ನು ನೋಡಿ ಇಂದಿನವರು ಕಲಿಬೇಕು. ಜವಾನನಿಂದ ದಿವಾನವರಗೆ ಒಂದೇ ಜಾತಿಯವರನ್ನು ಹಾಕಿಕೊಳ್ಳಲು ಆಗಲ್ಲ. ಎಲ್ಲ ವರ್ಗದವರಿಗೂ ಅವಕಾಶ ನೀಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸವರಾಜ್ ರಾಯರೆಡ್ಡಿ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು ರಾಯರೆಡ್ಡಿ, ಸಿದ್ದರಾಮಯ್ಯನವರ ಖಾಸಗಿ ಸ್ನೇಹಿತರು. ಹೀಗಾಗಿ ಅವರ ಪತ್ರದ ಬಗ್ಗೆ ಅವರಿಗೇ ಕೇಳಬೇಕು. ಬಿ.ಎಲ್ ಸಂತೋಷ. ಆಪರೇಷನ್ ಕಮಲದಲ್ಲಿ ಡಾಕ್ಟರೇಟ್ ತಗೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ