Mysore
32
scattered clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

Vijay Hazare Trophy 2023: ಮತ್ತೆ ಶತಕ ಸಿಡಿಸಿದ ಪಡಿಕ್ಕಲ್‌; ಚಂಢೀಗಡಕ್ಕೆ ಸವಾಲಿನ ಗುರಿ ನೀಡಿದ ಕರ್ನಾಟಕ

ಪ್ರಸ್ತುತ ನಡೆಯುತ್ತಿರುವ ವಿಜಯ್‌ ಹಜಾರೆ ಟ್ರೋಫಿಯಲ್ಲಿನ ಗ್ರೂಪ್‌ ಹಂತದಲ್ಲಿ ಇಲ್ಲಿಯವರೆಗೂ 4 ಪಂದ್ಯಗಳಲ್ಲಿ ಕಣಕ್ಕಿಳಿದು ಎಲ್ಲಾ ಪಂದ್ಯಗಳಲ್ಲಿಯೂ ಗೆಲುವು ಸಾಧಸಿರುವ ಕರ್ನಾಟಕ ತಂಡ ಇಂದು ( ಡಿಸೆಂಬರ್‌ 1 ) ನಡೆಯುತ್ತಿರುವ ಐದನೇ ಪಂದ್ಯದಲ್ಲಿ ಚಂಢೀಗಡ್‌ ವಿರುದ್ಧ ಸೆಣಸಾಡುತ್ತಿದೆ.

ವಲ್ಲಭ್‌ ವಿದ್ಯಾನಗರ್‌ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ದೇವದತ್ ಪಡಿಕ್ಕಲ್‌ ಅಬ್ಬರದ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 299 ರನ್‌ ಕಲೆಹಾಕಿ ಎದುರಾಳಿ ಚಂಡೀಗಢ್‌ ತಂಡಕ್ಕೆ ಗೆಲ್ಲಲು 300 ರನ್‌ಗಳ ಸವಾಲಿನ ಗುರಿ ನೀಡಿದೆ.

ಕರ್ನಾಟಕದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಆರ್‌ ಸಮರ್ಥ್‌ 5 ರನ್‌ ಗಳಿಸಿದರೆ, ನಾಯಕ ಮಯಾಂಕ್‌ ಅಗರ್ವಾಲ್‌ 19 ರನ್‌ ಗಳಿಸಿದರು. ಆರಂಭಿಕ ಆಘಾತ ಅನುಭವಿಸಿದ್ದ ತಂಡಕ್ಕೆ ದೇವದತ್‌ ಪಡಿಕ್ಕಲ್‌ 103 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 9 ಬೌಂಡರಿ ಬಾರಿಸುವ ಮೂಲಕ 114 ರನ್‌ ಗಳಿಸಿದರು. ಇನ್ನುಳಿದಂತೆ ಮನೀಶ್‌ ಪಾಂಡೆ ಅಜೇಯ 53, ಜಗದೀಶ ಸುಚಿತ್‌ ಶೂನ್ಯ, ಕೃಷ್ಣಪ್ಪ ಗೌತಮ್‌ 1 ಹಾಗೂ ಶರತ್‌ ಬಿ ಆರ್‌ ಅಜೇಯ 1 ರನ್‌ ಗಳಿಸಿದರು.

ಚಂಡೀಗಢದ ಪರ ಸಂದೀಪ್‌ ಶರ್ಮಾ ಹಾಗೂ ಮನ್‌ದೀಪ್‌ ಸಿಂಗ್‌ ತಲಾ ಎರಡು ವಿಕೆಟ್‌ ಪಡೆದರೆ, ಮುರುಗನ್‌ ಅಶ್ವಿನ್‌ ಹಾಗೂ ಅರ್ಸ್ಲಾನ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ