Mysore
22
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

Under 19 Worldcup 2024: ಸೆಮಿಫೈನಲ್‌ ಪ್ರವೇಶಿಸಿದ ಭಾರತ

ದಕ್ಷಿಣ ಆಫ್ರಿಕಾದ ಮಾಂಗ್ವಾಂಗ್ ಓವಲ್ ಕ್ರೀಡಾಂಗಣದಲ್ಲಿ ಭಾರತ ಅಂಡರ್ 19 ತಂಡ ಸೂಪರ್ ಸಿಕ್ಸ್ ಸುತ್ತಿನ ತಮ್ಮ ಎರಡನೇ ಪಂದ್ಯದಲ್ಲಿ ನೇಪಾಳ ಅಂಡರ್ 19 ತಂಡವನ್ನು 132 ರನ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ. ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜತೆ ಸೆಣಸಾಡಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ ನಾಯಕ ಉದಯ್ ಸಹರಣ್ ಹಾಗೂ ಸಚಿನ್ ದಾಸ್ ಶತಕಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 297 ರನ್ ಕಲೆಹಾಕಿ ನೇಪಾಳ ತಂಡಕ್ಕೆ ಗೆಲ್ಲಲು 298 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನೇಪಾಳ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ‌ 165 ರನ್ ಗಳಿಸಿತು‌.

 

ಭಾರತದ ಇನ್ನಿಂಗ್ಸ್: ಆದರ್ಶ್ ಸಿಂಗ್ 21, ಅರ್ಶಿನ್ ಕುಲ್ಕರ್ಣಿ 18, ಪ್ರಿಯಂಶು ಮೊಳಿಯ 19, ಉದಯ್ ಸಹರಣ್ 100, ಸಚಿನ್ ದಾಸ್ 116, ಮುಶೀರ್ ಖಾನ್ ಅಜೇಯ 9 ರನ್ ಹಾಗೂ ಅರವೆಳ್ಳಿ ಅವಿನಾಶ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.

ನೇಪಾಳದ ಪರ ಗುಲ್ಶಾನ್ ಝಾ 3 ವಿಕೆಟ್ ಹಾಗೂ ಆಕಾಶ್ ಚಂದ್ 1 ವಿಕೆಟ್ ಪಡೆದರು.

ನೇಪಾಳ ಇನ್ನಿಂಗ್ಸ್: ದೀಪಕ್ ಬೊಹಾರ 22, ಅರ್ಜುನ್ ಕುಮಾಲ್ 26, ಉತ್ತಮ್ ಮಗರ್ 8, ದೇವ್ ಖನಲ್ 33, ಬಿಶಾಲ್ ಬಿಕ್ರಮ್ 1, ದೀಪಕ್ ದುಮ್ರೆ ೦, ಗುಲ್ಶಾನ್ ಝಾ 1, ದೀಪೇಶ್ ಕಂಡೆಲ್ 0, ಸುಭಾಷ್ ಭಂಡಾರಿ 5, ಆಕಾಶ್ ಚಾಂದ್ ಅಜೇಯ 19 ಹಾಗೂ ದುರ್ಗೇಶ್ ಗುಪ್ತಾ ಅಜೇಯ 29 ರನ್ ಗಳಿಸಿದರು.

ಭಾರತದ ಪರ ಸೌಮಿ ಪಾಂಡೆ 4 ವಿಕೆಟ್, ಅರ್ಶಿನ್ 2 ವಿಕೆಟ್, ರಾಜ್ ಲಿಂಬಾಣಿ, ಆರಾಧ್ಯ ಶುಕ್ಲಾ ಹಾಗೂ ಮುರುಗನ್ ಅಭಿಷೇಕ್ ತಲಾ ಒಂದೊಂದು ವಿಕೆಟ್ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ