Mysore
18
overcast clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ತುಮಕೂರು| ಹೇಮಾವತಿ ನಾಲೆಯಲ್ಲಿ ಕೊಚ್ಚಿಹೋದ ಇಬ್ಬರು ಮಕ್ಕಳ: ಮತ್ತೊಬ್ಬ ಬಾಲಕನ ರಕ್ಷಣೆ

ತುಮಕೂರು: ಗುಬ್ಬಿ ತಾಲೂಕಿನ ಇಸ್ಲಾಂಪುರ ಗ್ರಾಮದ ಬಳಿ ಹೇಮಾವತಿ ನಾಲೆಗೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ ಹೊಂದಿದ್ದಾರೆ.

ಮೃತರನ್ನು 9 ವರ್ಷದ ಮಿಸ್ಬಾ ಬಾನು ಮತ್ತು 7 ವರ್ಷದ ಮಹಮ್ಮದ್ ನಯೀಮ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಬಾಲಕ 10 ವರ್ಷದ ಮಹ್ಮದ್ ಬಿಲಾಲ್ ನನ್ನು ರಕ್ಷಿಸಲಾಗಿದೆ.

ಈ ಮೂವರು ಮಕ್ಕಳು ನಾಲೆಗೆ ಬಿದ್ದಿದ್ದರು. ಇದನ್ನು ಗಮನಿಸಿದ ಯುವಕನೊಬ್ಬ ಕೂಡಲೇ ನಾಲೆಗೆ ಹಾರಿ ಮಹ್ಮದ್ ಬಿಲಾಲ್‌ನನ್ನು ರಕ್ಷಣೆ ಮಾಡಿದ್ದಾನೆ. ಆದರೆ ಮತ್ತಿಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು.

ನಾಲೆಯಲ್ಲಿ ಕೊಚ್ಚಿ ಹೋಗಿರುವ ಮಿಸ್ಬಾ ಬಾನು ಮತ್ತು ಮಹಮ್ಮದ್ ನಯೀಮ್ ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!