ಕೊಡಗು: ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ನಾಪೋಕ್ಲು ಹಳೆ ರಸ್ತೆ ಮೇಲೆ ಒಂದು ಅಡಿ ನೀರು ನಿಂತಿದೆ.
ನಿನ್ನೆ ಸಂಜೆಯಿಂದ ಭಾಗಮಂಡಲ ವ್ಯಾಪ್ತಿಯ ಬಾಚಿ ಮಲೆ, ಪಟ್ಟಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಬಿದ್ದರಿಂದ ಕನ್ನಿಕೆ, ಸುಜೊತಿ,ಹಾಗು ತಲಕಾವೇರಿಯಲ್ಲಿ ಅಧಿಕ ಪ್ರಮಾಣದ ಮಳೆಯಾದ್ದರಿಂದ ತ್ರಿವೇಣಿ ಸಂಗಮದಲ್ಲಿ ಹೆಚ್ಚು ನೀರು ಹರಿಯುತ್ತಿದೆ.
ಭಾಗಮಂಡಲ ತಲಕಾವೇರಿಗೆ ಭಕ್ತಾದಿಗಳ ಸಂಖ್ಯೆ ಇಂದು ಬೆಳಿಗ್ಗೆ ಕ್ಷಿಣಿಸಿದೆ. ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಅಭಿವೃದ್ಧಿಪಡಿಸಲಾದ ಉದ್ಯಾನವನ ಸಂಪೂರ್ಣವಾಗಿ ಜಲಾವೃತ ವಾಗಿದೆ.
ನಾಪೋಕ್ಲು- ಭಾಗಮಂಡಲ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸೇತುವೆ ನಿರ್ಮಾಣದಿಂದ ಸಂಪರ್ಕ ಕಡಿತದಿಂದ ಮುಕ್ತಿ ಸಿಕ್ಕಿದೆ.
ಜಿಲ್ಲೆಯ ನದಿಪಾತ್ರದ ನಿವಾಸಿಗಳಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ಜಿಲ್ಲಾಡಳಿತದಿಂದ ಅಗತ್ಯ ಮುನ್ನಚ್ಚರಿಕೆ ವಹಿಸಲಾಗಿದೆ.