Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಶ್ರೀನಿವಾಸ್‌ ಪ್ರಸಾದ್‌ ವಿಧಿವಶ; ನಾಳೆ ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಸರ್ಕಾರಿ ರಜೆ

ಮೈಸೂರು: ಹಿರಿಯ ರಾಜಕಾರಣಿ, ದಮನಿತರ ಗಟ್ಟಿ ಧ್ವನಿ ವಿ.ಶ್ರೀನಿವಾಸ್‌ ಪ್ರಸಾದ್‌ ಅವರ ನಿಧನದ ಗೌರವಾರ್ಥ ನಾಳೆ(ಏ.30) ಮೈಸೂರು-ಚಾಮರಾಜನಗರದ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜು ಹಾಗೂ ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಬಗ್ಗೆ ಅಧಿಕೃತ ಆದೇಶ ಪ್ರಕಟಿಸಿದ ರಾಜ್ಯ ಸರ್ಕಾರ, ಪೂರ್ವ ನಿಗದಿತ ಪರೀಕ್ಷೆ ಹೊರತುಪಡಿಸಿ, ಉಳಿದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ. ನೆಗೋಷಿಯೇಬಲ್‌ ಇನ್ಸುಸ್ಟ್ರುಮೆಂಟ್‌ ಆಕ್ಟ್‌ 1881 ರ ಪ್ರಕಾರ ಸಾರ್ವಜನಿಕ ರಜೆ ಘೋಷಿಸಲಾಗಿದ್ದು, ಮೃತರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಜಯ್‌ ಕುಮಾರ್‌ ಹೆಚ್.ಬಿ ಆದೇಶ ಹೊರಡಿಸಿದ್ದಾರೆ.

Tags: