ಕೊಳ್ಳೇಗಾಲ : ಗಂಡ ಹೆಂಡತಿ ಜಗಳಕ್ಕೆ ಇಬ್ಬರು ಮಕ್ಕಳ ಜೊತೆ ಪತ್ನಿ ವಿಷ ಸೇವಿಸಿರುವ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಿಷ ಸೇವಿಸಿದವರ ಪೈಕಿ ಸಿಂಧು(8) (ಮಗಳು) ಸಾವನ್ನಪ್ಪಿದ್ದು, ತಾಯಿ ಮಗನ ಸ್ಥಿತಿ ಜಿಂತಾಜನಕವಾಗಿದೆ.
ಮಧುವನಹಳ್ಳಿ ಗ್ರಾಮದ ಷಣ್ಮುಖಸ್ವಾಮಿ ಎಂಬಾತನ ಮಗಳು ಸಿಂಧು(8) ಮೃತ್ತ ದುರ್ದೈವಿ. ಷಣ್ಮುಖಸ್ವಾಮಿ ಪತ್ನಿ ಶೀಲಾ (30) ಹಾಗೂ ಯಶ್ವಂತ್(8) ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈಕೆಯ ಗಂಡ ಮಂಗಳವಾರ ರಾತ್ರಿ ಕುಡಿದು ಬಂದು ಜಗಳವಾಡಿದ್ದಲ್ಲದೇ ಬುಧವಾರ ಬೆಳಿಗ್ಗೆಯೂ ಜಗಳವಾಡಿದ್ದರಿಂದ ಬೇಸತ್ತ ಹೆಂಡತಿ, ಮಕ್ಕಳಿಗೆ ವಿಷ ಕುಡಿಸಿ ತಾನು ವಿಷ ಸೇವಿಸಿದ್ದಾಳೆ. ವಿಷ ಕುಡಿದು ಮನೆಯಲ್ಲಿ ನರಳುತ್ತಿದ್ದವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.
ಆದರೆ ವಿಷ ಕುಡಿದಿದ್ದ ಸಿಂಧು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ, ಆಕೆಯ ತಾಯಿ ಹಾಗೂ ತಮ್ಮನ ಸ್ಥಿತಿ ಜಿಂತಾಜನಕವಾಗಿದ್ದರಿಂದ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಳ್ಳಲಾಗಿದೆ.





