Mysore
14
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಈ ಸಲ ನಡೆಯೋದಿಲ್ವಾ ಟಿಪ್ಪು ಜಯಂತಿ?

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ ದೊಡ್ಡ ಸದ್ದು ಮಾಡಿತ್ತು. ಟಿಪ್ಪು ಜಯಂತಿ ಕಾರಣಕ್ಕೆ ರಾಜ್ಯಾದ್ಯಂತ ಪ್ರಕ್ಷುಬ್ಧ ವಾತಾವರಣ ಉಂಟಾಗಿ, ಸಾವು-ನೋವುಗಳೂ ಸಂಭವಿಸಿದ್ದವು. ಈಗ ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದಿದ್ದು, ‘ಈ ಸಲ ಟಿಪ್ಪು ಜಯಂತಿ ನಡೆಯೋದಿಲ್ವಾ?’ ಎಂಬ ಅನುಮಾನ ಉಂಟಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯದಲ್ಲಿ ಹಮ್ಮಿಕೊಳ್ಳಲಿರುವ ಜಯಂತಿಗಳ ಪಟ್ಟಿಯನ್ನು ಸರ್ಕಾರ ಇಂದು ಬಿಡುಗಡೆ ಮಾಡಿದ್ದು, ಅದರಲ್ಲಿ ಒಟ್ಟು 31 ಜಯಂತಿಗಳ ಉಲ್ಲೇಖವಿದೆ. ಆದರೆ ಟಿಪ್ಪು ಜಯಂತಿಯ ಪ್ರಸ್ತಾಪವಿಲ್ಲ. ಹೀಗಾಗಿ ಈ ಸಲ ಟಿಪ್ಪು ಜಯಂತಿ ಆಚರಣೆ ಇದೆಯೋ ಇಲ್ಲವೋ ಎಂಬ ಕುತೂಹಲವೊಂದು ಮೂಡಿದೆ.

ಒಂದು ವೇಳೆ ಆಚರಣೆ ಇದೆ ಎಂದಾದರೆ ಈ ಸಲವೂ ಮತ್ತೆ ವಿವಾದಾತ್ಮಕ ಇಲ್ಲವೇ ಸಂಘರ್ಷಾತ್ಮಕ ವಾತಾವರಣ ಸೃಷ್ಟಿಯಾದರೂ ಅಚ್ಚರಿ ಇಲ್ಲ. ಮತ್ತೊಂದೆಡೆ ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಿಸಲ್ಪಡುವ ಜಯಂತಿಗಳ ವಿವರ. ಟಿಪ್ಪು ಜಯಂತಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮೂಲಕ ಆಚರಿಸಲ್ಪಡಲಿದೆ, ಹೀಗಾಗಿ ಅದು ಈ ಪಟ್ಟಿಯಲ್ಲಿಲ್ಲ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈಗ ಬಿಡುಗಡೆ ಆಗಿರುವ ಜಯಂತಿಗಳ ಪಟ್ಟಿ ಟಿಪ್ಪು ಜಯಂತಿ ಕುರಿತು ಕುತೂಹಲವನ್ನು ಕೆರಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!