ಬೆಂಗಳೂರು : ಯಶವಂತಪುರದಿಂದ ಪಶ್ಚಿಮ ಬಂಗಾಳದ ಹೌರಾಗೆ ತೆರಳುತ್ತಿದ್ದ ರೈಲು ಅಪಘಾತಕ್ಕೊಳಗಾಗಿದ್ದು, 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇತ್ತ ಬೆಂಗಳೂರಿನಿಂದ ಓಡಿಶಾಗೆ ಹೊರಡಬೇಕಿದ್ದ ಮೂರು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಹಣ ಹಿಂದಿರುಗಿಸಲಾಗುತ್ತಿದೆ. ಇಂದು ಬೆಂಗಳೂರಿನ ಬೈಯಪ್ಪನಹಳ್ಳಿ SMVT ರೈಲ್ವೆ ನಿಲ್ದಾಣದಿಂದ ತೆರಳಬೇಕಿದ್ದ ಮೂರು ರೈಲುಗಳ ಸಂಚಾರವನ್ನು (ರದ್ದುಗೊಂಡ ರೈಲುಗಳ ಸಂಖ್ಯೆ- 12551, 12864 ಮತ್ತು 12253) ರದ್ದುಗೊಳಿಸಲಾಗಿದೆ.
ಅಪಘಾತಕ್ಕೊಳಗಾದ ರೈಲಿನಲ್ಲಿ ಬೈಯ್ಯಪ್ಪನಹಳ್ಳಿ SMVTನಿಂದ 1,294 ಮಂದಿ ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ 994 ಮಂದಿ ರಿಸರ್ವ್ಡ್ ಪ್ಯಾಸೆಂಜರ್, 300 ಅನ್ ರಿಸರ್ವ್ಡ್ ಪ್ಯಾಸೆಂಜರ್ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಳಸದ 110 ಜನ ಸೇಫ್
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಮಂದಿ ಇದೇ ರೈಲಿನಲ್ಲಿ ಜಾರ್ಖಂಡ್ನ ಸಮ್ಮೇದ ಶಿಖರ್ಜಿಗೆ ಪ್ರಯಾಣ ಬೆಳೆಸಿದ್ದರು. ಎಲ್ಲರೂ ಅಪಘಾತಕ್ಕೀಡಾದ ಬೋಗಿಗಳ ಪಕ್ಕದ ಬೋಗಿಯಲ್ಲಿ ಕುಳಿತಿದ್ದರು ಎಂದು ತಿಳಿದು ಬಂದಿದೆ. 150 ಜನರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳಸ, ಸಂಸೆ, ಹೊರನಾಡು ಸುತ್ತಮುತ್ತಲಿನ ಜೈನ ಸಮುದಾಯದ 110 ಮಂದಿ ಪ್ರಯಾಣಿಸುತ್ತಿದ್ದರು.
ರೈಲು ಅಪಘಾತದ ಸಹಾಯಕ್ಕಾಗಿ ಸಹಾಯವಾಣಿ
ಬೆಂಗಳೂರು: 080-22356409
ಬಂಗಾರಪೇಟೆ: 08153 255253
ಕುಪ್ಪಂ: 8431403419
ವಿಶ್ವೇಶ್ವರಯ್ಯ ಟರ್ಮಿನಲ್ : 09606005129
ಕೃಷ್ಣರಾಜಪುರಂ: 88612 03980