ಧಾರವಾಡ : ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಭವಿಷ್ಯ ನುಡಿದಿದ್ದ ಕೋಡಿ ಶ್ರೀಗಳಾದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇದೀಗ ಮತ್ತೆ ಜಗತ್ತಿನಲ್ಲಿ ಮೂರು-ನಾಲ್ಕು ಪ್ರಧಾನಿಗಳು ಸಾಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಕ್ರೋಧಿ ನಾಮ ಸಂವತ್ಸರದ ಭವಿಷ್ಯ ನುಡಿದಿರುವ ಅವರು, ಭಾರತೀಯ ಪದ್ಧತಿಯಲ್ಲಿ ಸಂವತ್ಸರಗೀಗ ಮಹತ್ವ ಇದೆ. ಸಧ್ಯ ಕ್ರೋಧಿ ನಾಮ ಸಂವತ್ಸರ ನಡೆಯುತ್ತಿದೆ. ಈ ಸಂದರ್ಭದಲ್ಲಿ ಒಳತಿಗಿಂತ ಹೆಚ್ಚಾಗಿ ಕೆಡಕೆ ಹೆಚ್ಚು ಎಂದು ತಿಳಿಸಿದ್ದಾರೆ.
ಪಂಚಭೂತಗಳಿಂದ ತೊಂದರೆ ಎದುರಾಗಲಿದೆ. ಭೂ ಕುಸಿತ, ಜಲಪ್ರಳಯದ ಲಕ್ಷಣಗಳು ಇದೆ. ಅಲ್ಲದೇ ಗಾಳಿಯಿಂದಲೂ ತೊಂದರೆ, ಆಕಾಶ ತತ್ವ ಆಗಲಿದೆ. ಈಗಲೆ ಅಶುಭ ನುಡಿಯಬಾರದು . ಶುಭವೋ ಅಶುಭವೋ ಎಂದು ಶ್ರವಣದಲ್ಲಿ ಹೇಳುವೆ ಎಂದು ತಿಳಿಸಿದ್ದಾರೆ.
ರಾಜಕೀಯದ ಬಗ್ಗೆ ಮಾತನಾಡಿದ ಅವರು, ರಾಷ್ಟ್ರದಲ್ಲಿ ಅಧಿಕಾರದ ಉದ್ದೇಶದಿಂದ ಕೂಡಿದ್ದಾರೆ. ಇನ್ನೂ ಅಂಗಡಿ ಓಪನ್ ಆಗಿಲ್ಲ. ವ್ಯಾಪಾರ ಶುರುವಾಗಿಲ್ಲ. ಆ ಬಳಿಕ ರಾಷ್ಟ್ರ ರಾಜಕಾರಣದ ಭವಿಷ್ಯ ಹೇಳುವೆ ಎಂದರು.
ಜಗತ್ತಿನ್ಲ್ಲಿ ಎರಡು, ಮೂರು ಪ್ರಧಾನಿಗಳ ಸಾವು ಆಗಲಿದೆ. ದೊಡ್ಡ ದೊಡ್ಡವರಿಗೆ ನೋವು ತಾಪ ದುಃಖಾಗಲಿದೆ ಎಂದು ತಿಳಿಸಿದ್ದಾರೆ.