ಬೆಂಗಳೂರು : ನಟ ದರ್ಶನ ಪರ ನಿಂತವರಿಗೂ ಇದೀಗ ಸಂಕಷ್ಟ ಎದುರಾಗಿದೆ. ಇವತ್ತಿನವರೆಗೆ ಒಂದು ಲೆಕ್ಕಾ ಆದರೆ ನಾಳೆಯಿಂದ ಇನ್ನೊಂದು ಲೆಕ್ಕ.
ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಬಾಯಿಗೆ ಬಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿ ಹರಿಬಿಡುತ್ತಿರುವವರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.
ಹೌದು, ದರ್ಶನ್ ಬಂಧನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ದಿನೇ ದಿನೇ ಹೆಚ್ಚಾಗುತ್ತಿದೆ.
ದರ್ಶನ್ ಅಭಿಮಾನಿ ಹೆಸರಿನಲ್ಲಿ ಬೆದರಿಕೆ ಹಾಕುವುದು ಅಥವ ಬಾಯಿಗೆ ಬಂದಂತೆ ಮಾತನಾಡುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಪೊಲೀಸ್ ಪಡೆ ಮುಂದಾಗಿದೆ.
ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಪೋಸ್ಟ್ ಅಥವ ವಿಡಿಯೋ ಮಾಡುವವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲ ಖಾಕಿ ಪಡೆ ಸಿದ್ಧತೆ ನಡೆಸಿದೆ.
ಅಷ್ಟೇ ಅಲ್ಲದೆ, ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅಭಿಮಾನಿ ಹೆಸರಿನಲ್ಲಿ ಮಾಧ್ಯಮ ಹಾಗೂ ಪೊಲೀಸರ ವಿರುದ್ಧ ನಾಲಿಗೆ ಹರಿಬಿಟ್ಟವರಿಗೂ ಸಂಕಷ್ಟ ಎದುರಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಕೆಲವರ ಪಟ್ಟಿ ತಯಾರಾಗಿದ್ದು, ನಾಳೆಯಿಂದ ಸಂಬಂಧಪಟ್ಟ ಎಲ್ಲರನ್ನೂ ಠಾಣೆಗೆ ಕರೆಸಿ ಎಚ್ಚರಿಕೆ ನೀಡುವ ಹಾಗೂ ಕ್ರಮ ಕೈಗೊಳ್ಳುವ ಎಲ್ಲಾ ತಯಾರಿಯನ್ನು ಖಾಕಿ ಪಡೆ ತಿಳಿಸಿದೆ.