Mysore
29
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ರಾಮಲಲ್ಲಾ ಫೋಟೊ ನಿಜವಾದುದ್ದಲ್ಲ, ಈ ಬಗ್ಗೆ ತನಿಖೆಯಾಗಬೇಕು: ಪ್ರಧಾನ ಅರ್ಚಕ

ನಿನ್ನೆ ( ಜನವರಿ 19 ) ಅಯೋಧ್ಯೆಯ ರಾಮಮಂದಿರದ ಗರ್ಭಗುಡಿ ತಲುಪಿರುವ ಬಾಲರಾಮನ ಫೋಟೊ ಲೀಕ್‌ ಆಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮೊದಲಿಗೆ ಬಟ್ಟೆ ಇಂದ ಸುತ್ತಲ್ಪಟ್ಟ ವಿಗ್ರಹ, ಬಳಿಕ ಕಣ್ಣಿಗೆ ಮಾತ್ರ ಬಟ್ಟೆ ಕಟ್ಟಿದ ಬಾಲರಾಮನ ವಿಗ್ರಹದ ಫೋಟೊ ವೈರಲ್‌ ಆಗಿತ್ತು. ನಂತರ ಸಂಪೂರ್ಣ ಬಾಲರಾಮನ ಫೋಟೊ ಹರಿದಾಡಿತ್ತು.

ಈ ಫೋಟೊ ಕುರಿತು ಇದೀಗ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಮಾತನಾಡಿದ್ದು ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊ ನಿಜವಾದುದ್ದಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಎಎನ್‌ಐ ಜತೆ ಮಾತನಾಡಿದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ “ಪ್ರಾಣ ಪ್ರತಿಷ್ಠೆ ಮುಗಿಯುವ ಮುನ್ನ ಬಾಲರಾಮ ಮೂರ್ತಿಯ ಕಣ್ಣುಗಳಿಗೆ ಕಟ್ಟಿರುವ ಬಟ್ಟೆಯನ್ನು ತೆಗೆಯುವ ಹಾಗಿಲ್ಲ. ಕಣ್ಣಿಗೆ ಬಟ್ಟೆ ಕಟ್ಟದೇ ಇರುವ ವಿಗ್ರಹ ನಿಜವಾದುದ್ದಲ್ಲ. ಹಾಗೇನಾದರೂ ಕಣ್ಣುಗಳು ಕಂಡಿದ್ದರೆ, ಈ ಫೋಟೊವನ್ನು ಹರಿಬಿಟ್ಟಿದ್ದು ಯಾರು, ವೈರಲ್‌ ಮಾಡಿದ್ದು ಯಾರು ಎಂಬುದರ ಕುರಿತು ತನಿಖೆ ಆಗಬೇಕು” ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಈ ಫೋಟೊವನ್ನು ವಿವಿಧ ಕ್ಷೇತ್ರಗಳ ಪ್ರಮುಖರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಎಲ್ಲೆಡೆ ವೈರಲ್‌ ಆಗಿದೆ. ಕಣ್ಣಿಗೆ ಬಟ್ಟೆ ಇಲ್ಲದೇ ಇರುವ ವಿಗ್ರಹದ ಫೋಟೊವನ್ನು ಮಂದಿರಕ್ಕೆ ಸ್ಥಳಾಂತರಿಸುವ ಮುನ್ನವೇ ಕ್ಲಿಕ್ಕಿಸಿರಬಹುದು ಎಂಬ ಸಂದೇಹವೂ ಸಹ ಇದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!