Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ತೆಲಂಗಾಣ ವಿಧಾನಸಭೆ ಎಕ್ಸಿಟ್‌ ಪೋಲ್‌ ಪ್ರಕಟ: ಯಾರಿಗೆ ಸಿಗಲಿದೆ ಅಧಿಕಾರದ ಗದ್ದುಗೆ?

ನವದೆಹಲಿ : ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ಕೇಂದ್ರ ಬಿಂದುವಾಗಿರುವ ಪಂಚ ರಾಜ್ಯ ಚುನಾವಣೆಯಲ್ಲಿ ದಕ್ಷಿಣ ಏಕೈಕ ರಾಜ್ಯ ತೆಲಂಗಾಣದಲ್ಲಿ ಜಿದ್ದಾಜಿದ್ದಿನ ಪೈಪೋಟಿಯಿದ್ದು, ಕಾಂಗ್ರೆಸ್‌ಗೆ ಈ ಬಾರಿಯ ಬಹುಮತ ಎಂದು ಸಮೀಕ್ಷೆಗಳು ಹೇಳಿವೆ.

ಐದು ರಾಜ್ಯಗಳ ಪೈಕಿ ತೆಲಂಗಾಣಕ್ಕೆ ಕೊನೆಯದಾಗಿ ನವೆಂಬರ್ 30ರಂದು ಮತದಾನ ಅಂತ್ಯಗೊಂಡ ಬೆನ್ನಲ್ಲೇ ಚುನಾವಣಾ ಸಮೀಕ್ಷೆಗಳು ತಮ್ಮ ಎಕ್ಸಿಟ್‌ ಪೂಲ್‌ ಮೂಲಕ ಫಲಿತಾಂಶ ತಿಳಿಸಿವೆ.

ಆಂಧ್ರಪ್ರದೇಶದಿಂದ ವಿಭಜನೆಯಾದ ಬಳಿಕ ತೆಲಂಗಾಣಕ್ಕೆ ಇದು ಮೂರನೇ ಚುನಾವಣೆಯಾಗಿದೆ. ಮೊದಲ ಎರಡೂ ಚುನಾವಣೆಗಳಲ್ಲಿ ಭಾರತ ರಾಷ್ಟ್ರ ಸಮಿತಿ ಗೆದ್ದು, ಅಧಿಕಾರದ ಗದ್ದುಗೆ ಹಿಡಿದಿತ್ತು. ಆದರೆ ಈ ಬಾರಿ ಕೆ ಚಂದ್ರಶೇಖರ್ ರಾವ್ ಅವರ ಪಕ್ಷಕ್ಕೆ ಹಾದಿ ಸುಗಮವಾಗಿಲ್ಲ ಎನ್ನಲಾಗುತ್ತಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

119 ಕ್ಷೇತ್ರಗಳಿರುವ ತೆಲಂಗಾಣದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಪಕ್ಷವೊಂದಕ್ಕೆ 60 ಸೀಟುಗಳ ಅವಶ್ಯಕತೆ ಇದೆ. ಕಾಂಗ್ರೆಸ್, ಬಿಆರ್‌ಎಸ್‌ ಮತ್ತು ಬಿಜೆಪಿ ನಡುವೆ ಗದ್ದುಗೆ ಯಾರಿಗೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾದರೆ ಸಮೀಕ್ಷೆಗಳು ಏನು ಹೇಳುತ್ತವೆ? ದೇಶದ ಪ್ರಮುಖ ಸಮೀಕ್ಷಾ ಸಂಸ್ಥೆ ಹಾಗೂ ಸುದ್ದಿವಾಹಿನಿಗಳು ನೀಡಿರುವ ವರದಿಗಳು ಇಲ್ಲಿವೆ ನೋಡಿ!

ಸಿಎನ್‌ಎನ್ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಅತಂತ್ರ ಸ್ಥಿತಿ ಎದುರಾಗಲಿದೆ. ಸಮೀಕ್ಷೆ ಪ್ರಕಾರ 10 ಸೀಟುಗಳನ್ನು ಪಡೆಯಲಿರುವ ಬಿಜೆಪಿ ಅಥವಾ ಇತರೆ 5 ಸೀಟುಗಳನ್ನು ಗೆಲ್ಲಲಿರುವವರು ಕಿಂಗ್‌ಮೇಕರ್ ಆಗಬಹುದು.
ಕಾಂಗ್ರೆಸ್: 56
ಬಿಆರ್‌ಎಸ್: 48
ಬಿಜೆಪಿ: 10
ಇತರೆ: 5

ಟೈಮ್ಸ್ ನೌ- ಇಟಿಜಿ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಬಿಆರ್‌ಎಸ್ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ.
ಕಾಂಗ್ರೆಸ್: 37
ಬಿಆರ್‌ಎಸ್: 66
ಬಿಜೆಪಿ: 7
ಇತರೆ: 9

ಜನ್‌ಕಿ ಬಾತ್ ಎಕ್ಸಿಟ್ ಪೋಲ್ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ.
ಕಾಂಗ್ರೆಸ್: 48-64
ಬಿಆರ್‌ಎಸ್: 45-55
ಬಿಜೆಪಿ: 7-13
ಎಐಎಂಐಎಂ: 4-7

ಚಾಣಕ್ಯ ಸ್ಟ್ರಾಟಜಿಸ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯಲಿದೆ.
ಕಾಂಗ್ರೆಸ್‌: 67-78
ಬಿಆರ್‌ಎಸ್‌: 22-31
ಬಿಜೆಪಿ: 6-9
ಇತರೆ: 6-7

ಆರಾ ಫ್ರೀಪೋಲ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ಸರಳ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ.
ಕಾಂಗ್ರೆಸ್‌: 58-67
ಬಿಆರ್‌ಎಸ್‌: 41-49
ಬಿಜೆಪಿ: 5-7
ಇತರೆ: 9

ಪೀಪಲ್ಸ್‌ ಪಲ್ಸ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದು ಗದ್ದುಗೆ ಏರಲಿದೆ.
ಕಾಂಗ್ರೆಸ್‌: 62-72
ಬಿಆರ್‌ಎಸ್‌: 35-46
ಬಿಜೆಪಿ: 3-8
ಇತರೆ: 7-9

ರೇಸ್‌ ಎಕ್ಸಿಟ್‌ ಪೋಲ್ಸ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ.
ಕಾಂಗ್ರೆಸ್‌: 57-67
ಬಿಆರ್‌ಎಸ್‌: 45-51
ಬಿಜೆಪಿ: 1-5
ಇತರೆ: 6-7

ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ಭರ್ಜರಿ ಜಯ ದಾಖಲಿಸಿ ಅಧಿಕಾರ ಹೊಂದಲಿದೆ.
ಕಾಂಗ್ರೆಸ್‌: 63-79
ಬಿಆರ್‌ಎಸ್‌: 31-47
ಬಿಜೆಪಿ: 2-4
ಇತರೆ: 5-7

ಸ್ಮಾರ್ಟ್‌ ಪೋಲ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ದೊಡ್ಡ ಗೆಲುವು ದಾಖಲಿಸಿ ಗದ್ದುಗೆ ಹಿಡಿಯಲಿದೆ.
ಕಾಂಗ್ರೆಸ್‌: 70-82
ಬಿಆರ್‌ಎಸ್‌: 24-36
ಬಿಜೆಪಿ: 3-8
ಇತರೆ: 6-8

ರಿಪಬ್ಲಿಕ್‌ ಟಿವಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ ಸರಳ ಬಹುಮತ ದೊರೆಯಲಿದೆ.
ಕಾಂಗ್ರೆಸ್:‌ 58-68
ಬಿಆರ್‌ಎಸ್‌: 46-56
ಬಿಜೆಪಿ: 4-9
ಇತರೆ: 5-7

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ