ನವದೆಹಲಿ : ‘ಸನಾತನ ಧರ್ಮ’ ಕುರಿತು ವಿವಾದಾತ್ಮಕ ಹೇಳಿಕೆಗೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿ ನಿರ್ಮೂಲನೆ ಮಾಡಬೇಕೆಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ಮತ್ತೊಬ್ಬ ಡಿಎಂಕೆ ನಾಯಕ ಎ ರಾಜಾ ಕೂಡ ಸನಾತನ ಧರ್ಮದ ವಿರುದ್ಧ ಮಾತನಾಡಿದ್ದರು.
ಆದರೆ ಈ ಟೀಕೆಗಳಿಂದ ಕಂಗೆಡದ ಉದಯನಿಧಿ ಸ್ಟಾಲಿನ್, ಈ ವಿವಾದಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಕಾನೂನಾತ್ಮಕವಾಗಿ ಎದುರಿಸುವುದಾಗಿ ಹೇಳಿದ್ದರು.
ಅಸ್ಪ್ರಶ್ಯತೆ ನಾಶಕ್ಕೂ ಸನಾತನ ಧರ್ಮಕ್ಕೂ ಸಂಬಂಧ : ಈ ಮುನ್ನ ಉದಯನಿಧಿ ಸ್ಟಾಲಿನ್ ಸನಾತನದ ನಿರ್ಮೂಲನೆಯಾದಾಗ ಮಾತ್ರ ಅಸ್ಪೃಶ್ಯತೆಯೂ ಕೊನೆಗೊಳ್ಳುತ್ತದೆ ಎಂದು ಹೇಳಿದ್ದರು. ಅಸ್ಪೃಶ್ಯತೆ ತೊಲಗಬೇಕಾದರೆ ಸನಾತನ ಧರ್ಮ ನಿರ್ಮೂಲನೆಯಾಗಬೇಕು ಎಂದು ತಮಿಳುನಾಡು ಕ್ರೀಡಾ ಮತ್ತು ಯುವಜನ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಸನಾತನ ಧರ್ಮ ನಾಶವಾದರೆ ಅಸ್ಪೃಶ್ಯತೆಯೂ ತಾನಾಗಿಯೇ ಅಂತ್ಯವಾಗುತ್ತದೆ ಎಂದಿದ್ದರು.
ರಾಜ್ಯದಲ್ಲಿ ಸಾಮಾಜಿಕ ತಾರತಮ್ಯ ಕುರಿತು ತಮಿಳುನಾಡು ರಾಜ್ಯಪಾಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಉದಯನಿಧಿ ಈ ಹೇಳಿಕೆ ನೀಡಿದ್ದರು. ಸನಾತನ ಧರ್ಮವನ್ನು ಕಿತ್ತುಹಾಕುವುದು ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯುತ್ತದೆ ಎಂದು ಹೇಳಿದ್ದರು,